ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರಾಜ್ಯದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭ: ವರ್ಲ್ಡ್ ಎಕನಾಮಿಕ್ ಫೋರಂನೊಂದಿಗೆ ಒಪ್ಪಂದಕ್ಕೆ ಮುಖ್ಯಮಂತ್ರಿ ಉತ್ಸಾಹದ ಪ್ರತಿಕ್ರಿಯೆ

know_the_cm

(ದಾವೊಸ್, ಸ್ವಿಟ್ಜರ್ಲ್ಯಾಂಡ್), ಜನವರಿ 20, 2020

-ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಕರ್ನಾಟಕದಲ್ಲಿ 'ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್' ಪ್ರಾರಂಭಿಸಲು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ರಾಜ್ಯದಲ್ಲಿ ಹೂಡಿಕೆದಾರರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.

-ದಾವೊಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ 'ಕರ್ನಾಟಕ ಪೆವಿಲಿಯನ್' ಉದ್ಘಾಟನೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊರಾಟ್ ಸಾನ್ಮೆಝ್ ಅವರು ಮಾತನಾಡುತ್ತ, ವ್ಯಾಪಾರ, ವಹಿವಾಟಿನಲ್ಲಿ ನೈತಿಕತೆಯು ಕಡಿಮೆಯಾಗುತ್ತಿರುವ ಕುರಿತು ಹೂಡಿಕೆದಾರರು ಕಳವಳ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಗಳು 'ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್' ಅನ್ನು ಪ್ರಾರಂಭಿಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯಲು ಈ ಕೇಂದ್ರ ಸಹಕಾರಿ ಎಂದು ವಿವರಿಸಿದರು.

-ಕರ್ನಾಟಕ ರಾಜ್ಯವು ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸುವುದಾದರೆ, ಈ ಕೇಂದ್ರವನ್ನು ಕೂಡಲೇ ಸ್ಥಾಪಿಸುವಂತೆ ಸಲಹೆ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಈ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಿದರು.

-ನಂತರ 'ಕರ್ನಾಟಕ ಪೆವಿಲಿಯನ್' ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯವರು, ಸುಲಲಿತ ವಹಿವಾಟು ನಡೆಸಲು ಸರ್ಕಾರ ಹೂಡಿಕೆದಾರರಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

-ಅಭಿವೃದ್ಧಿಯ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ರಾಜ್ಯ ಸರ್ಕಾರ ಉತ್ಸುಕವಾಗಿದ್ದು, ಜಾಗತಿಕ ಮಟ್ಟದಲ್ಲಿ ಕರ್ನಾಟಕ ಮುಂಚೂಣಿಗೆ ಬರಲು ನೆರವಾಗುವ ಅಧ್ಯಯನಗಳನ್ನು ಕೈಗೊಳ್ಳಲು ಆಸಕ್ತಿ ವಹಿಸಿದೆ ಎಂದು ತಿಳಿಸಿದರು.

-ಸುಸ್ಥಿರ ಕೈಗಾರಿಕೆಗಳನ್ನು ರೂಪಿಸುವ ಮೂಲಕ ಕರ್ನಾಟಕ ರಾಜ್ಯವು ವರ್ಲ್ಡ್ ಎಕನಾಮಿಕ್ ಫೋರಂ - 2020ರ ಗುರಿ ಸಾಧನೆಗೆ ಸಕ್ರಿಯವಾಗಿ ಶ್ರಮಿಸಲಿದೆ. ಭಾರತದ ಪ್ರಮುಖ ಕೈಗಾರಿಕಾ ರಾಜ್ಯವಾಗಿ ಹೊರಹೊಮ್ಮುವ ಮೂಲಕ ಜಾಗತಿಕ ಮಟ್ಟದಲ್ಲಿಯೂ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ರಾಜ್ಯ ಪ್ರಮುಖ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

-ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ ವಿ ರಮಣ ರೆಡ್ಡಿ, ಭಾರತ ಮತ್ತು ಏಷ್ಯಾ ಅಜೆಂಡಾದ ಪ್ರಾದೇಶಿಕ ಮುಖ್ಯಸ್ಥ ವಿರಾಜ್ ಮೆಹ್ತಾ ಉಪಸ್ಥಿತರಿದ್ದರು.

---------------

know_the_cm

(Davos, Switzerland), January 20, 2020

Karnataka Signs Pact with WEF to Start Centre for Internet of Ethical Things

-Though it was an informal beginning for the business for Karnataka at the WEF, it was all formal. The chief minister B S Yediyurappa turned on a new chapter in the history of Karnataka‘s industry by signing a pact with the WEF on starting ‘Centre for Internet of ethical things’ which is anticipated to go a long way in providing a competitive and congenial level playing field for the investors and industrialists.

-According to the WEF organizers, it is Karnataka which has come forward to start such a Centre which is first of its kind in the world.

-In his interaction with the Karnataka delegates in front of the chief minister Yediyurappa, Murat Sonmez said the investors are worried about the ethical practices in business and the governments have failed to realize the need of the house to set up ‘Centre for internet of ethical things’. He said if the Karnataka government is serious to do business by inviting investments, it should immediately set up the ‘Centre for internet of ethical things’. For which the chief minister immediately accepted. Sonmez said if you are so keen to start the Centre, ‘’why we cannot sign an informal MOU on a plain paper which we can authenticate in the coming days’’.Sonmez who was serious on this score, himself took a plain paper and scribbled the agreement.

-Taken aback by the promise made by the chief minister and eagerness to create a congenial atmosphere for the investors, Sonmez said he was surprized at the Karnataka government agreement on this score and said this Centre will go a long way in the Karnataka’s history of Industrial development. ''This Centre will keep check on misuse of artificial intelligence'' he added.

-Later at the formal inauguration of the Karnataka pavilion chief minister said through this forum he promised government’s full support to the investor in ensuring ease of doing business.

-“we are happy to be here and look forward to engage in deep conversations on various development agenda” he said adding that he is keen to partner on certain strategic research that can help Karnataka in becoming a major player on the global agenda.

-Yediyurappa said we can build the future for the world, and play an active role in shaping the sustainable industry in Karnataka in line with the WEF 2020 objective. “With Karnataka emerging as the leading industrial states in India, we can make Karnataka a major player on the global agenda and Industries growth”.

-State Industry minister Jagadish Shettar, chief secretary T M Vijay bhasker, Industries secretary Ramanareddy were also signatories to the informal agreement.

-The idea to start this Centre was impromptu and made by Morat Sonmez the managing director of the WEF when he was here this morning to witness the inauguration of the ‘Karnataka pavilion’ by the chief minister B S Yediyurappa.ppa.ng a pact with the WEF on starting ‘Centre for Internet of ethical things’ which is anticipated to go a long way in providing a competitive and congenial level playing field for the investors and industrialists.

*************