ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಶತಮಾನದ ಹಿಂದೆಯೇ ಭಾರತೀಯ ಮಹಿಳೆಯ ಶೌರ್ಯ ಪ್ರದರ್ಶಿಸಿದ ಅಬ್ಬಕ್ಕ - ಮುಖ್ಯಮಂತ್ರಿ

know_the_cm

(ಮೂಡಬಿದಿರೆ), ಡಿಸೆಂಬರ್ 25, 2019

-ವೀರರಾಣಿ ಅಬ್ಬಕ್ಕ ನೂರಾರು ವರ್ಷಗಳ ಹಿಂದೆಯೇ ಫೋರ್ಚುಗೀಸರ ವಿರುದ್ಧ ಹೋರಾಡಿ ಭಾರತೀಯ ಮಹಿಳೆಯ ಶೌರ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಹೇಳಿದರು.

-ಮೂಡಬಿದಿರೆಯಲ್ಲಿ ನಡೆಯುತ್ತಿರುವ 17ನೇ ವರ್ಷದ ಕೋಟಿ ಚೆನ್ನಯ ಕಂಬಳದಲ್ಲಿ ವೀರರಾಣಿ ಅಬ್ಬಕ್ಕ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.

-ಅಂದಿನ ಯುಗದಲ್ಲಿ ಮಹಿಳೆಯೊಬ್ಬರು ದಂಡನಾಯಕತ್ವ ವಹಿಸಿರುವುದು ನಿಜಕ್ಕೂ ಅಪ್ರತಿಮವಾಗಿದೆ. ಅವರ ಪ್ರತಿಮೆ ಸ್ಥಾಪನೆ ಸಂತಸದ ಸಂಗತಿ ಎಂದರು.

-ಕಂಬಳ ಕ್ರೀಡೆ ಉಳಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಕಂಬಳ ನಡೆಸಲು ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಾಗಿ ಬಂತು ಎಂದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರ ಇದಕ್ಕೆ ಬೆಂಬಲ ನೀಡಲಿದೆ ಎಂದು ತಿಳಿಸಿದರು.

know_the_cm

-ಮೂಡಬಿದಿರೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲಿದೆ ಎಂದು ಘೋಷಿಸಿದರು.

-ಸಚಿವರಾದ ಬಸವರಾಜ ಬೊಮ್ಮಾಯಿ, ಸಿ ಟಿ ರವಿ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.

*************