ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಶಾಂತಿ ಕಾಪಾಡಿ: ಮುಖ್ಯಮಂತ್ರಿ ಮನವಿ

know_the_cm

(ಬೆಂಗಳೂರು), ಡಿಸೆಂಬರ್ 19, 2019

-ಯಾವುದೇ ಕಾರಣಕ್ಕೂ ಶಾಂತಿ ಕದಡಲು ಬಿಡದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಡಿನ ಜನತೆಯಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

-ಎಲ್ಲರು ಶಾಂತಿ ಕಾಪಾಡಿ ಮತ್ತು ಜನರ ಆಶಯಗಳಿಗೆ ಧಕ್ಕೆ ತರಬೇಡಿ ಎಂದು ಮುಖ್ಯಮಂತ್ರಿಗಳು ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ನಾಯಕರಿಗೆ ಮನವಿ ಮಾಡಿದ್ದಾರೆ.

-ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪೌರತ್ವ ತಿದ್ದುಪಡಿ ಕಾಯ್ದೆ, ಅದು ದೇಶದ ಕಾನೂನು. ಇದರಿಂದ ದೇಶದ ಪ್ರಜೆಗಳಿಗೆ ಯಾವುದೇ ತೊಂದರೆ ಇಲ್ಲ ಮತ್ತು ಆತಂಕಕ್ಕೆ ಒಳಪಡುವ ಅವಶ್ಯಕತೆ ಇಲ್ಲ. ದೇಶದ ನಾಗಕರಿಗೆ ಇದರಿಂದ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

-ಪೌರತ್ವ ಕಾಯ್ದೆ ಜನರನ್ನು ಅವರ ರಾಷ್ಟ್ರೀಯತೆ ಆಧಾರದ ಮೇಲೆ ಗುರುತಿಸುತ್ತದೆ ವಿನಃ. ಅವರ ಜಾತಿ ಪಂಥ ಧರ್ಮದ ಮೇಲೆ ಅಲ್ಲ. ಇದು ರಾಷ್ಟ್ರೀಯ ಕಾಯ್ದೆ. ದೇಶದ ಎಲ್ಲಾ ರಾಜ್ಯಗಳು, ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದು ಕಾಯ್ದೆ ತಾನಾಗಿಯೇ ಅನ್ವಯವಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

-------------

Chief Minister appeals to maintain peace and calm

-Chief Minister has urged and appealed to all political parties, leaders and people in general to maintain calm on the CAA issue.

-Speaking to the media at his home office, Krishna, he said, CAA is no threat to the people of this country. It is only an act applied to the people from other countries who seek citizenship. CAA does not discriminate people on the basis of religion. Citizenship is accorded on the basis of their nationality and not on the basis of religion or caste.

-He claimed that Opposition parties and leaders who are opposing this are doing it with a political intention and people of this country are intelligent to understand their motto.

-Citizenship Amendment Act is a national Act. CAA is a constitutional provision, there is no question of states rejecting it. As a member of the federal set up, every state is bound by the constitution, he said.

*************