ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ನಡೆಸಿದ ಪತ್ರಿಕಾ ಗೋಷ್ಠಿಯ ಮುಖ್ಯಾಂಶಗಳು

know_the_cm

(ಗೃಹ ಕಚೇರಿ ಕೃಷ್ಣಾ, ಬೆಂಗಳೂರು), ನವೆಂಬರ್ 06, 2019

ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಸುಧಾರಣೆ ಮತ್ತು ಸಂಚಾರ ದಟ್ಟಣೆ ನಿವಾರಿಸುವ ಕುರಿತು ನಡೆದ ಸಭೆಯ ನಂತರ, ಮಾನ್ಯ ಮುಖ್ಯಮಂತ್ರಿಯವರು ನಡೆಸಿದ ಪತ್ರಿಕಾ ಗೋಷ್ಠಿಯ ಮುಖ್ಯಾಂಶಗಳು.

1. ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಸುಧಾರಣೆ ಮತ್ತು ಸಂಚಾರ ದಟ್ಟಣೆ ನಿವಾರಿಸಿ ವಾಯುಮಾಲಿನ್ಯ ತಗ್ಗಿಸುವ ಕುರಿತು ಇಂದು ಪರಿಣಿತರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.

2. ಬೆಂಗಳೂರು ಮೊಬಿಲಿಟಿ ಮ್ಯಾನೆಜ್ಮೆಂಟ್ ಅಥಾರಿಟಿ (ಬಿಎಂಎಂಎ) ಸ್ಥಾಪಿಸಿ ಸಂಯೋಜಿತ ಸಂಚಾರ ನಿರ್ವಹಣೆ ಕೈಗೊಳ್ಳಲು ನಿರ್ಧರಿಸಲಾಯಿತು.

3. ನಗರದ ಅತ್ಯಂತ ದಟ್ಟಣಿಯುಳ್ಳ 12 ಕಾರಿಡಾರ್ಗಳ ರಸ್ತೆಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಹಾಗೂ ಸೈಕಲ್ ಲೇನ್ಗಳನ್ನು ಸ್ಥಾಪಿಸಿ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ನಿರ್ಧರಿಸಲಾಯಿತು.(ಅತೀ ಹೆಚ್ಚು ವಾಹನ ಸಂಚಾರ ಇರುವ ಕೆ.ಆರ್. ಪುರ, ಹಳೆ ಮದ್ರಾಸ್ ರಸ್ತೆ, ವೈಟ್ಫೀಲ್ಡ್, ಎಲೆಕ್ಟಾನಿಕ್ ಸಿಟಿ, ಹೊಸೂರು ರಸ್ತೆ, ಮೈಸೂರು ರಸ್ತೆ, ಹೊರವರ್ತುಲ ರಸ್ತೆ ಇತ್ಯಾದಿ).

4. ಪ್ರಸ್ತುತ ಬಿಎಂಟಿಸಿ ಬಳಿ 6,500 ಬಸ್ಗಳಿದ್ದು ಹೆಚ್ಚುವರಿಯಾಗಿ 6,000 ಬಸ್ಗಳನ್ನು ಸೇರ್ಪಡೆ ಮಾಡಲು ಕ್ರಮಕೈಗೊಳ್ಳಲಾಗುವುದು.

5. ಹೊಸ ಬಸ್ ಗಳನ್ನು ಕೊಳ್ಳುವ ಬದಲು ಒಪ್ಪಂದದ ಮೇರೆಗೆ ಬಸ್ ಉತ್ಪಾದಿಸುವ ಕಂಪನಿಗಳಿದ ನೇರವಾಗಿ ಬಾಡಿಗೆ ಮೇಲೆ ಪಡೆಯಲು ನಿರ್ಧರಿಸಲಾಯಿತು.

6. ಹೊಸ ಬಸ್ ಗಳಲ್ಲಿ ಶೇಕಡಾ 50ರಷ್ಟು Electric ಬಸ್ ಗಳನ್ನು ಒದಗಿಸಲು ಕ್ರಮ ಜರುಗಿಸಿ, ಇವುಗಳನ್ನು ಪ್ರತ್ಯೇಕ ಲೇನ್ ಗಳ ಸಂಚಾರಕ್ಕೆ ಒದಗಿಸಲು ನಿರ್ಧರಿಸಲಾಯಿತು. ಇದರಿಂದ ಶೇಕಡಾ 50ರಷ್ಟು ಮಾಲಿನ್ಯ ಪ್ರಮಾಣ ತಡೆಗಟ್ಟಬಹುದಾಗಿದೆ.

7. ಪ್ರಸ್ತುತ ಸಾರ್ವಜನಿಕ ಸಾರಿಗೆ ತುಟ್ಟಿಯಾಗಿದ್ದು, ಬಡವರು ಮತ್ತು ಮದ್ಯಮ ವರ್ಗದವರು ದ್ವಿಚಕ್ರ ವಾಹನ ಇತ್ಯಾದಿ ಖಾಸಗಿ ವಾಹನಗಳನ್ನು ಬಳಸಲು ಮುಂದಾಗುತ್ತಿದ್ದಾರೆ. ಆದ್ದರಿಂದ ಬಿಎಂಟಿಸಿ ಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಿ, ಬಸ್ ದರ ಇಳಿಸಿ ಈ ವರ್ಗದ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಪ್ರೇರಿಪಿಸಲು ನಿರ್ಧರಿಸಲಾಯಿತು.

8. ಮೆಟ್ರೋ 2ನೇ ಹಂತ 2021ರ ಅಕ್ಟೋಬರ್ – ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಯಿತು. (ಒಟ್ಟು 119 ಕಿ.ಮೀ. ಪ್ರಸ್ತುತ ಮೊದಲನೇ ಹಂತ 42 ಕಿ.ಮೀ ಇದೆ).

9. ಹೊರ ವರ್ತುಲ ರಸ್ತೆ – ಏರ್ಪೋರ್ಟ್ ಮಾರ್ಗದ ಮೆಟ್ರೋ ಯೋಜನೆಯನ್ನು 2023ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

10. 2025ರ ವೇಳೆಗೆ ಬೆಂಗಳೂರು ಮೆಟ್ರೋ ವಿಸ್ತೀರ್ಣವನ್ನು 300 ಕಿ.ಮೀ ಗೆ ವಿಸ್ತರಿಸಲು ಸೂಚಿಸಲಾಯಿತು.

11. 2022ರ ವೇಳೆಗೆ ಪೂರ್ವ ದಿಕ್ಕಿನ ವೈಟ್ಫೀಲ್ಡ್ / ಹೊರ ವರ್ತುಲ ರಸ್ತೆ / ಐಟಿಪಿಎಲ್ ಪ್ರದೇಶದ ಐಟಿ ಹಬ್ ಜೊತೆಗೆ ಪಶ್ಚಿಮದ ಯಶವಂತಪುರ / ಪೀಣ್ಯ ಕೈಗಾರಿಕಾ ಹಬ್ಗೆ ಸಂಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

12. 2022ರ ವೇಳೆಗೆ ಫೆರಿಫರಲ್ ರಿಂಗ್ ರಸ್ತೆ (ನಗರದ ಅಂಚಿನ ವರ್ತುಲ ರಸ್ತೆ) ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಯಿತು.

13. ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಗೆ ಬಳಸಿ ಖಾಸಗಿ ವಾಹನಗಳ ಓಡಾಟ ತಪ್ಪಿಗಿ ವಾಯು ಮಾಲಿನ್ಯ ನಿಯಂತ್ರಿಸಿ, ಬೆಂಗಳೂರು ನಗರವನ್ನು ಆಹ್ಲಾದಕರ ವಾತಾವರಣವುಳ್ಳ ನಗರವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಯಿತು.

14. ಮೆಟ್ರೋ 3ನೇ ಹಂತವನ್ನು ಹೊಸಕೋಟೆ ಕ್ರಾಸ್ ವರೆಗೆ ವಿಸ್ತರಿಸಲು (ವೈಟ್ ಫೀಲ್ಡ್ - ಸರ್ಜಾಪುರ ಮಾರ್ಗದಲ್ಲಿ) ನಿರ್ಧರಿಸಲಾಯಿತು.

ಘನ ತ್ಯಾಜ್ಯ ನಿರ್ವಹಣೆ:

15. ಬೆಂಗಳೂರು ನಗರದಲ್ಲಿ ಸಂಗ್ರಹವಾಗುವ ಕಸ ನಿರ್ವಹಣೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸೂಚಿಸಲಾಯಿತು.

16. ಕಸ ಸಾಗಣಿ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್ ಉಪಕರಣ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಯಿತು. ಈ ವಾಹನಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು.

17. ಘನತ್ಯಾಜ್ಯ ನಿರ್ವಹಣೆ ಕಾರ್ಯದ ಉಸ್ತುವಾರಿಗೆ 20 ಇಂಜಿನಿಯರ್ಗಳನ್ನು ತಕ್ಷಣವೇ ನೇಮಿಸಿಕೊಳ್ಳಲು ಸೂಚಿಸಲಾಯಿತು.

18. ಘನ ತ್ಯಾಜ್ಯ ನಿರ್ವಹಣೆಗೆ ಹೆಚ್ಚುವರಿ ಪೌರ ಕಾರ್ಮಿಕರನ್ನು ಬಳಸಲು ಸೂಚಿಸಲಾಯಿತು.

19. ವೈಜ್ಞಾನಿಕ ಸಂಸ್ಕರಣಾ ಘಟಕಗಳ ಸಂಖ್ಯೆಯನ್ನು ಹೆಚ್ಚಿಸಿ ಉತ್ತಮ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುವುದು.

20. ಪ್ರತಿ ದಿನ ಬೆಂಗಳೂರು ನಗರದಲ್ಲಿ ಸುಮಾರು 4,500 ಮೆಟ್ರಿಕ್ ಟನ್ ಕಸ್ ಉತ್ಪಾದನೆ ಯಾಗುತ್ತಿದ್ದು, ಪ್ರಸ್ತುತ 2,500 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ. ಆದ್ದರಿಂದ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಅಗತ್ಯವಾದ ಹೆಚ್ಚುವರಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ.

ನಗರದೊಳಗಿನ ಕೆರೆಗಳ ನಿರ್ವಹಣೆ:

-• ಬೆಂಗಳೂರು ನಗರದಲ್ಲಿರುವ ಎಲ್ಲಾ ಕೆರೆಗಳ ನಿರ್ವಹಣೆಯನ್ನು ಬಿ.ಬಿ.ಎಂ.ಪಿ ಗೆ ವಹಿಸಲು ನಿರ್ಧರಿಸಲಾಯಿತು.

-• ಎಲ್ಲಾ ಕೆರೆಗಳ ಏರಿಗಳನ್ನು ಭದ್ರಪಡಿಸಿ, ವಾಕಿಂಗ್ ಪಾತ್ ನಿರ್ಮಿಸಿ ಸೌಂದರ್ಯವರ್ಧನೆಗೆ ಕ್ರಮಕೈಗೊಳ್ಳಲು ಸೂಚಿಸಲಾಯಿತು.

-• ಕೆರೆ ಪ್ರದೇಶದಲ್ಲಿ ಬಡವರು ಮನೆಕಟ್ಟಿದ್ದರೆ ಅವುಗಳನ್ನು ಬಿಟ್ಟು ಶ್ರೀಮಂತರು ಮತ್ತು ಬಿಲ್ಡರ್ ಗಳು ಒತ್ತುವರಿ ಮಾಡಿದ್ದರೆ ಅದನ್ನು ತೆರವುಗೊಳಿಸಲು ಸೂಚಿಸಲಾಯಿತು.

--------------------------------

CHIEF MINISTER’s PRESS MEET TALKING POINTS

1. Today we held a meeting of experts and public representatives to discuss the problems faced by Bengaluru.

2. It was decided to establish Bengaluru Mobility Management Authority (BMMA) to enable combined traffic maintenance.

3. As per the discussions to ease traffic on city roads, we have identified 12 corridors for separate movement of buses and bicycle riders.

4. We have also decided to add 6000 buses to the present fleet of 6500, Instead of purchasing new buses we will hire the buses.

5. We will also add some electric buses to reduce pollution level.

6. We will encourage mass travel modes to persuade the middle class people from riding their own vehicles.

7. Major decision was to extend metro rail link upto 119 kms from the present 42 kms.

8. Metro will be extended till Hoskote cross on whitefield sarjapur link.

9. By 2025 we will extend the metro rail ine to 300 kms.

10. By 2022 , IT hub areas which are located in the east, like whitefield , outer ring road will be linked with Yeshwantpur/ Peenya industrial areas which are located in the west.

Solid waste management:

11. Most worrying is the waste treatment in the city. We have decided to make it mandatory to adopt scientific ways to treatment solid waste.

12. At present only 2500 tonnes of waste is being treated of the 4500 tonnes generated.

13. GPS instruments will be fitted to all vehicles that transport garbage to effectively monitor waste management.

14. It was instructed to appoint 20 engineers to oversee Solid Waste Management.

15. It was also instructed to avail services of additional civic workers for this purpose.

16. It was decided to increase the number of scientific processing units to effectively dispose waste.

17. All the tanks management will be handed over to BBMP.

18. All tank bunds will be protected to prevent encroachment. pathways will be constructed for beautification.

19.It was instructed to clear encroachment of lake beds by builders and influential people and houses built by the poor should be let off.

*************