ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

'ರಾಷ್ಟ್ರಪಿತ' ಮಹಾತ್ಮ ಗಾಂಧೀಜಿಯವರಿಗೆ ಅವರ 150 ನೇ ಜನ್ಮ ದಿನಾಚರಣೆಯಂದು ಶತ ಶತ ನಮನಗಳು

know_the_cm

(ಬೆಂಗಳೂರು), ಅಕ್ಟೋಬರ್ 02, 2019

-ಮಹಾನ್ ಚೇತನದ ಜನ್ಮ ದಿನದ ಸಂಭ್ರಮ ನಮ್ಮ ರಾಷ್ಟ್ರಕ್ಕೆ ಸೀಮಿತವಾಗಿರದೆ ಇಡಿ ವಿಶ್ವವೇ ಸಂಭ್ರಮಿಸುತ್ತಿದೆ.

-ಬಾಪೂಜಿಯ ಅಸ್ತ್ರವಾದ ಅಹಿಂಸೆಯ ಐದು ಆಧಾರ ಸ್ತಂಭಗಳು: ಗೌರವ, ತಿಳುವಳಿಕೆ, ಸ್ವೀಕಾರ, ಮೆಚ್ಚುಗೆ ಮತ್ತು ಸಹಾನುಭೂತಿ ಭಾರತದ ಏಕತೆಗೆ ಭದ್ರ ಬುನಾದಿಯನ್ನು ಹಾಕಿದೆ. ಸಂತನಂತೆ ಬಾಳಿ ಬದುಕಿದ ಬಾಪೂಜಿ ಅಹಿಂಸೆಗೆ ಅನ್ವರ್ಥಕರಾಗಿದ್ದು, ಅವರ ಜನ್ಮದಿನದಂದು ಅಂತರರಾಷ್ಟ್ರೀಯ ಅಹಿಂಸಾತ್ಮಕ ದಿನವನ್ನು ಆಚರಿಸಲಾಗುತ್ತಿದೆ.

-ಭಾರತೀಯರು ಹೆಮ್ಮೆ ಪಡುವ ವಿಷಯವೆಂದರೆ ಹೇಗ್ನ ಶಾಂತಿ ಅರಮನೆಯ ( Peace Palace ) ಹೊರಗೆ ಪ್ರಜ್ವಲಿಸುವ ಶಾಶ್ವತ 'ವಿಶ್ವ ಶಾಂತಿ ಜ್ವಾಲೆ' ಯನ್ನು ದೆಹಲಿಯ ರಾಜ್ ಘಾಟ್ನಲ್ಲಿರುವ ಮಹಾತ್ಮ ಗಾಂಧೀಜಿ ಸ್ಮಾರಕದಿಂದ ಹೊತ್ತಿಸಲಾಗಿದೆ.

-ಬಾಪೂಜಿಯವರು ತಮ್ಮ ಧ್ಯೇಯ ಮಂತ್ರ "…Recall the face of the poorest man [woman], and ask yourself, if the step you contemplate is going to be of any use to him [her]..." ಮೂಲಕ ಪ್ರಪಂಚದಾದ್ಯಂತದ ನಾಯಕರಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ.

-ಗಾಂಧೀಜಿ ಒಬ್ಬ ವ್ಯಕ್ತಿಯಾಗಿರದೆ, ಒಂದು ವಿಚಾರಧಾರೆಯಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಡಿಗಳನ್ನು ಮೀರಿ ನಮ್ಮ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಜೀವನಕ್ಕೆ ಮಾರ್ಗದರ್ಶಕರಾಗಿ ಮುನ್ನಡೆಸುತ್ತಿದ್ದಾರೆ. ನಮ್ಮನ್ನು ಸದಾಚಾರದ ಮಾರ್ಗದಲ್ಲಿ ನಡೆಸಲು ಬಾಪೂಜಿ ಉಲ್ಲೇಖಿಸಿದ 7 ನೀತಿಗಳು ಈ ಜಾಗತೀಕರಣ ಯುಗದಲ್ಲಿ ಹೆಚ್ಚು ಪ್ರಸ್ತುತವಾಗಿವೆ.

ಅವುಗಳೆಂದರೆ:

Politics without principles.

Wealth without work.

Pleasure without conscience.

Knowledge without character.

Commerce without morality.

Science without humanity.

Worship without sacrifice.

*************

know_the_cm

-I offer prayers to 'Father of the Nation' Mahatma Gandhiji on his 150th birth anniversary. The 150th birth anniversary of Gandhiji is a global event and not merely a national celebration.

-Bapuji's five pillars of non-violence: respect, understanding, acceptance, appreciation, and compassion have laid a solid foundation for united India.

-The saintly man was a synonym for non-violence; hence, the International Day of Non-Violence is being observed on his birthday. The eternal 'World Peace flame' that burns outside the Peace Palace in The Hague has been created using a flame from the Mahatma Gandhi memorial at Raj Ghat in Delhi.

-Gandhiji's Talisman: "…Recall the face of the poorest man [woman], and ask yourself, if the step you contemplate is going to be of any use to him [her]..." set a direction for leaders across the world to follow.

-Gandhi, as an idea, continues to be a guiding light for our political, cultural and social life, transcending national and international boundaries. Seven social sins cited by Bapuji to protect individuals from straying into ungodliness are ever more relevant as we progress in the globalized world.

Politics without principles.

Wealth without work.

Pleasure without conscience.

Knowledge without character.

Commerce without morality.

Science without humanity.

Worship without sacrifice.

-Each individual should be aware of these principles in building a peaceful and prosperous society.

*************