ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ವಿಧ್ಯುಕ್ತ ಚಾಲನೆ

know_the_cm

(ಮೈಸೂರು), ಸೆಪ್ಟೆಂಬರ್ 29, 2019

-ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರು ಬೆಳಿಗ್ಗೆ 9-39 ಗಂಟೆಯ ಶುಭ ಲಗ್ನದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ವಿಧ್ಯುಕ್ತವಾಗಿ ಚಾಲನೆ ನೀಡಿದರು.

-ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಎಸ್.ಎಲ್ ಭೈರಪ್ಪ, ಸಾಮಾನ್ಯವಾಗಿ ಸಾಹಿತಿಗಳು ದೇವರನ್ನು ನಂಬುವುದಿಲ್ಲ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ತಾವು ಅಂತಹ ಸಾಹಿತಿ ಅಲ್ಲ ಎಂದರು.

-ಪ್ರಕೃತಿಯನ್ನು ನಾವು ಹೆಣ್ಣಿನ ರೂಪದಲ್ಲಿ ನೋಡುವುದರಿಂದ ಮೊದಲ ಪೂಜೆ ಸ್ತ್ರೀ ದೇವತೆಗೆ ನೀಡಲಾಗುವುದು. ಮನೆಯಲ್ಲೂ ಮಾತೃ ಪೂಜೆ ಮೊದಲು ಅದೇ ರೀತಿ ದೇಶದಲ್ಲೂ ಸಹಾ ಹೆಣ್ಣಿಗೆ ಎಲ್ಲಾ ವಿಷಯದಲ್ಲೂ ವಿಶೇಷ ಸ್ಥಾನ ನೀಡಲಾಗುತ್ತಿದೆ ಎಂದರು.

-ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಡಿನ ಜನತೆ ನೆಮ್ಮದಿಯಿಂದ, ಸಮೃದ್ಧಿಯಿಂದ ಸುಭಿಕ್ಷೆಯಿಂದ ಬದುಕಲಿ ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಪೂಜೆ ಸಲ್ಲಿಸಿರುವೆ. ದಸರಾ ಮಹೋತ್ಸವ ಎಂದರೆ ಕೆಟ್ಟದನ್ನು ಅಳಿಸಿ ಒಳ್ಳೆಯದನ್ನು ತರುವುದು ಆಗಿದೆ ಎಂದರು. ದಸರಾ ಹಬ್ಬವನ್ನು ಪರಂಪರೆಗೆ ಧಕ್ಕೆ ಬಾರದ ಹಾಗೆ ಸರ್ಕಾರ ನೋಡಿಕೊಂಡು ಬರುತ್ತಿದೆ ಎಂದರು.

-ಇಂತಹ ಹಬ್ಬವನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯಲು ಅರ್ಹರಾಗಿದ್ದಾರೆ ಎಂದರು.

-ಇದೇ ಸಂದರ್ಭದಲ್ಲಿ ದಸರಾ ಕ್ರೀಡಾ ಜ್ಯೋತಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿರೂರಪ್ಪ ಅವರು ಚಾಲನೆ ನೀಡಿ, ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಉಷಾರಾಣಿ ಹಾಗೂ ಧನುಷಾ ಅವರಿಗೆ ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು.

-ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಈ ಸಂದರ್ಭದಲ್ಲಿ ಮಾತನಾಡಿದರು.

-ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಸಿ.ಟಿ. ರವಿ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

know_the_cm

*************