ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಶಿವಮೊಗ್ಗದಲ್ಲಿ ಆಯುಷ್ ಫಾರ್ಮ, ವೆಲ್ ನೆಸ್ ಕ್ಲಸ್ಟರ್: ಸೂಕ್ತ ಪ್ರಸ್ತಾವನೆಗೆ ಮುಖ್ಯಮಂತ್ರಿ ಸೂಚನೆ

know_the_cm

ವಿಧಾನಸೌಧ, (ಬೆಂಗಳೂರು), ಸೆಪ್ಟೆಂಬರ್ 13, 2019

-ಮಾನ್ಯ ಮುಖ್ಯಮಂತ್ರಿ ಗಳು ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

-ಈ ಸಂದರ್ಭದಲ್ಲಿ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಆಯುಷ್ ಫಾರ್ಮಾ, ಬಯೋ ಫಾರ್ಮಾ, ಆರೋಗ್ಯ ಸೇವೆಗಳ (ವೆಲ್ ನೆಸ್) ಕ್ಲಸ್ಟರ್ ಸ್ಥಾಪನೆಗೆ ಅವಕಾಶವಿದೆ ಎಂದು ವಿವರಿಸಿದರು. ಈ ಕುರಿತು ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

-ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರು ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿರುವ 9 ಕೈಗಾರಿಕಾ ಕ್ಲಸ್ಟರ್ ಗಳ ಕುರಿತು ಮಾಹಿತಿ ನೀಡಿದರು.

-ಕೊಪ್ಪಳದಲ್ಲಿ ಆಟಿಕೆಗಳ ಕೈಗಾರಿಕೆ ಸ್ಥಾಪನೆ ಹಾಗೂ ಬಳ್ಳಾರಿಯಲ್ಲಿ ಜವಳಿ ಮತ್ತು ವಸ್ತ್ರೋದ್ಯಮ ಸ್ಥಾಪನೆಗೆ ಹಲವು ಕಂಪೆನಿಗಳು ಸಿದ್ಧತೆ ನಡೆಸಿದ್ದು, ವಸ್ತ್ರೋದ್ಯಮದಿಂದ ಮಹಿಳೆಯರಿಗೆ ಹೆಚ್ಚಿನ ಅವಕಾಶ ದೊರೆಯತ್ತದೆ ಎಂದು ವಿವರಿಸಿದರು.

-ಚಿಕ್ಕಬಳ್ಳಾಪುರದಲ್ಲಿ, ಮೊಬೈಲ್ ಫೋನ್ ಮತ್ತು ಇತರ ಇಲೆಕ್ಟ್ರಾನಿಕ್ ಉತ್ಪನ್ನಗಳು, ಚಿತ್ರದುರ್ಗದಲ್ಲಿ ಎಲ್ ಇ ಡಿ ಉಪಕರಣಗಳ ಕ್ಲಸ್ಟರ್, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ವೇರ್, ತುಮಕೂರಿನಲ್ಲಿ ಕ್ರೀಡೆ ಮತ್ತು ವ್ಯಾಯಾಮ ಸಲಕರಣೆಗಳ ತಯಾರಿಕೆಯ ಉದ್ಯಮ ಸ್ಥಾಪನೆಗೆ ಹಲವು ಕಂಪೆನಿಗಳು ಉತ್ಸುಕತೆ ತೋರಿವೆ. ಮಾತುಕತೆ ವಿವಿಧ ಹಂತದಲ್ಲಿದೆ ಎಂದು ತಿಳಿಸಿದರು.

-ರಾಜ್ಯದಲ್ಲಿ ಯುವಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೈಗಾರಿಕಾ ಕ್ಲಸ್ಟರುಗಳ ಸ್ಥಾಪನೆಯನ್ನು ಆದ್ಯತೆಯ ಮೇರೆಗೆ ಮಾಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

*************