ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಗ್ಲೋಬಲ್ ಎಕ್ಸಿಬಿಷನ್ ಇನ್ ಸರ್ವಿಸಸ್

know_the_cm

ವಿಧಾನಸೌಧ (ಬೆಂಗಳೂರು), ಆಗಸ್ಟ್ 28, 2019

-ಸಿಐಐ ಕರ್ನಾಟಕ ಅಧ್ಯಕ್ಷ ಅಮನ್ ಚೌಧುರಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿತು.

-ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಿನಲ್ಲಿ ಭಾರತ ಸರ್ಕಾರವು, ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮತ್ತು ಸೇವಾ ರಫ್ತು ಉತ್ತೇಜನಾ ಮಂಡಳಿ (ಸರ್ವಿಸಸ್ ಎಕ್ಸ್ ಪೋರ್ಟ್ ಪ್ರಮೋಷನ್ ಕೌನ್ಸಿಲ್) ಸಹಯೋಗದೊಂದಿಗೆ ಹಮ್ಮಿಕೊಂಡಿರುವ 5 ನೇ ಗ್ಲೋಬಲ್ ಎಕ್ಸಿಬಿಷನ್ ಇನ್ ಸರ್ವಿಸಸ್ (ಜಿಇಎಸ್) ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಕುರಿತು ಚರ್ಚಿಸಲಾಯಿತು.

-ಸೇವಾ ವಲಯಕ್ಕೆ ಸಂಬಂಧಿಸಿದ ಈ ಕಾರ್ಯಕ್ರಮದಿಂದ ಅತಿಥೇಯ ರಾಜ್ಯ ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

-ಸಿಐಐ ಉಪಾಧ್ಯಕ್ಷ ಸಂದೀಪ್ ಸಿಂಗ್, ಮಾಜಿ ಅಧ್ಯಕ್ಷರಾದ ಎಲ್. ಕೃಷ್ಣನ್, ಸಿಐಐ ಪ್ರಾದೇಶಿಕ ನಿರ್ದೇಶಕ ಆರ್.ಸತೀಶ್, ಸಿಐಐ ಕರ್ನಾಟಕದ ನಿರ್ದೇಶಕ ಮೇಜರ್ ನೀಲ್ ಕ್ಯಾಸ್ಟಲಿನೋ ಉಪಸ್ಥಿತರಿದ್ದರು.

know_the_cm

*************