ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಯಾಂತ್ರೀಕೃತ ಮೀನುಗಾರಿಕಾ ಬೋಟ್ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

know_the_cm

ಗೃಹಕಚೇರಿ ಕೃಷ್ಣಾ(ಬೆಂಗಳೂರು), ಆಗಸ್ಟ್ 21, 2019

-ಮೀನುಗಾರರ ಯಾಂತ್ರೀಕೃತ ಬೋಟ್ಗಳಿಗೆ ಡೆಲಿವರಿ ಪಾಯಿಂಟ್ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ತೆರಿಗೆ ರಹಿತ ಡೀಸೆಲ್ನ ಪ್ರಮಾಣವನ್ನು 400 ಲೀಟರುಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

-ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಅವರ ನೇತೃತ್ವದ ಮಲ್ಪೆ ಮೀನುಗಾರರ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ವಿವರಿಸಿ, ಕೆಲವು ಬೇಡಿಕೆಗಳನ್ನು ಮುಂದಿಟ್ಟರು.

-ಕಳೆದ ಎರಡು ವರ್ಷಗಳಿಂದ ಡೀಸೆಲ್ ಬೆಲೆ ಏರಿಕೆ, ಮತ್ಸ್ಯ ಕ್ಷಾಮ ಹಾಗೂ ಮೀನಿಗೆ ಯೋಗ್ಯ ಧಾರಣೆ ಸಿಗದೆ ಮೀನುಗಾರರು ಸುಸ್ತಿದಾರರಾಗಿದ್ದಾರೆ. ಪ್ರಸ್ತುತ ಮೀನುಗಾರರಿಂದ ಮಾರಾಟ ತೆರಿಗೆ ಪಡೆದುಕೊಂಡು ನಂತರ ಅವರ ಖಾತೆಗೆ ಈ ಮೊತ್ತವನ್ನು ಸರ್ಕಾರ ಜಮಾ ಮಾಡುತ್ತಿದೆ. ಈ ತೆರಿಗೆ ಹಣ ಕ್ರಮಬದ್ಧವಾಗಿ ಬಾರದೆ ಇರುವ ಕಾರಣ ತೊಂದರೆಯಾಗುತ್ತಿದೆ. ಆದ್ದರಿಂದ ಹಿಂದಿನಂತೆ ಡೆಲಿವರಿ ಪಾಯಿಂಟ್ನಲ್ಲಿ ತೆರಿಗೆ ರಹಿತ ಡೀಸೆಲ್ ನೀಡುವಂತೆ ಹಾಗೂ ಡೀಸೆಲ್ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡಿದ್ದರು.

-ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಿಂದಿನ ಪದ್ಧತಿಯಂತೆ ಡೀಸೆಲ್ ಒದಗಿಸುವಂತೆ ಹಾಗೂ ಡೀಸೆಲ್ ಪ್ರಮಾಣ 400 ಲೀಟರುಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಪರಿಹಾರ: ಕೇಂದ್ರಕ್ಕೆ ಪತ್ರ

-ಇದಲ್ಲದೆ ಭಾರತೀಯ ನೌಕಾಪಡೆಯ ಹಡಗೊಂದಕ್ಕೆ ಡಿಕ್ಕಿ ಹೊಡೆದು, ಮಲ್ಪೆಯ ಸುರ್ವಣ ತ್ರಿಭುಜ ಎಂಬ ಮೀನುಗಾರಿಕಾ ದೋಣಿ ಮುಳುಗಿದ್ದು, ಸಮುದ್ರದಲ್ಲಿ ಅದರ ಅವಶೇಷ ಪತ್ತೆಯಾಗಿದೆ. ಈ ದೋಣಿಯಲ್ಲಿದ್ದ ಮೀನುಗಾರರು ನಾಪತ್ತೆಯಾಗಿಲ್ಲ. ಅವರ ಕುಟುಂಬಗಳು ಸಂಕಷ್ಟದಲ್ಲಿದ್ದು, ಅವರಿಗೆ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವಂತೆ ಮೀನುಗಾರರು ಮನವಿ ಮಾಡಿದರು.

-ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

------------------------

know_the_cm

Home Office Krishna(Bengalore), August 21, 2019

-Chief Minister B.S.Yediyurappa has directed the Principal Secretary to Government, Animal Husbandry and Fisheries, to enhance the tax free diesel quota for fishing boats to 400 litres per day and also to provide tax free diesel at delivery point.

-A delegation of Fishermen led by Minister Kota Shrinivasa Poojari and Udupi MLA Raghupathi Bhat met Chief Minister and sought to resolve various issues as the fishermen are reeling under difficult times due to diesel price hike, dearth of fish and price fall. Currently Government has made fishermen buy diesel with tax and the tax amount is debited to their account later. But this process is cumbersome and the payments are delayed and fishermen are in distress. Therefore the members of the delegation appealed to the Chief Minister to introduce old system of providing tax free diesel at delivery point.

-Chief Minister has responded positively to their request and has directed officials to take necessary steps in this regard.

Missing fishermen: Letter to Central Government

-The delegation also sought Chief Minister’s intervention to provide compensation to the kins of victims of Suvarna Thribhuja boat tragedy, which had collided with INS ship and drowned. 7 fishermen in the boat could not be traced though the debris was found.

-Chief Minister assured them that he would write to Union Government to provide compensation to the families of the victims.

*************