ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಹೂಡಿಕೆದಾರರೊಂದಿಗೆ ಮುಖ್ಯಮಂತ್ರಿಗಳ ಸಂವಾದ

know_the_cm

(ಗೃಹ ಕಚೇರಿ ಕೃಷ್ಣಾ, ಬೆಂಗಳೂರು), ಅಕ್ಟೋಬರ್ 22, 2020

-ರಾಜ್ಯದಲ್ಲಿ ಕೊರೊನಾ ಕಾಲದಲ್ಲೂ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಕೈಗಾರಿಕಾ ನೀತಿಯಲ್ಲಿ ಬದಲಾವಣೆಗಳನ್ನು ತಂದಿದ್ದು, ಹೂಡಿಕೆದಾರರಿಗೆ ಅನುಕೂಲವಾಗುವಂತೆ ಎಲ್ಲ ಪೂರಕ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.

-ಕೃಷ್ಣಾದಲ್ಲಿ ಪಬ್ಲಿಕ್ ಅಫೇರ್ಸ್ ಫೋರಂ ಆಫ್ ಇಂಡಿಯಾದ ಏಳನೇ ರಾಷ್ಟ್ರೀಯ ಫೋರಂ 2020 ವರ್ಚುವಲ್ ಮೀಟ್ನಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಈಗಾಗಲೇ ಕರ್ನಾಟಕ ಐಟಿ ಹಬ್ ಎಂದು ಗುರುತಿಸಲ್ಪಟ್ಟಿದ್ದು, 2000 ಕ್ಕೂ ಹೆಚ್ಚು ಕಂಪೆನಿಗಳು ಇಲ್ಲಿವೆ. ಇದರ ಜೊತೆಗೆ ಸಂಶೋಧನೆ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ ಸ್ಟಾರ್ಟ್ ಅಪ್ ಗಳಲ್ಲೂ ಹೆಚ್ಚಿನ ಸಾಧನೆ ಮಾಡಿದೆ ಎಂದರು.

-ಕರ್ನಾಟಕದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಕೋಕಾಕೋಲಾ ಕಂಪೆನಿಯ ಮುಖ್ಯಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಯು.ಎಸ್- ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ಅಧ್ಯಕ್ಷರಾದ ನಿಶಾ ಬಿಸ್ವಾಲ್ ಅವರ ಹೂಡಿಕೆ ನೀತಿಯ ಕುರಿತು ಇದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.

-ಕರ್ನಾಟಕದಲ್ಲಿ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಕೈಗಾರಿಕೆಗಳ ಪುನಶ್ಚೇತನಕ್ಕೆ ಕೈಗೊಂಡಿರುವ ಕೈಗಾರಿಕಾ ನೀತಿಯಲ್ಲಿನ ತಿದ್ದುಪಡಿಗಳು ಹಾಗೂ ನೂತನ ಕೈಗಾರಿಕಾ ನೀತಿಯನುಸಾರ ಆರ್ಥಿಕತೆ, ಸಾರ್ವಜನಿಕ ಪಾಲುದಾರಿಕೆಯನ್ನು ಉತ್ತಮಪಡಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆದಾರರಿಗೆ ಪೂರಕ ವಾತಾವರಣ ಕರ್ನಾಟಕದಲ್ಲಿದೆ ಎಂದರು.

-ಹೂಡಿಕೆಗೆ ಸಂಬಂಧಿಸಿದಂತೆ ನಡೆದ ಇನ್ನೆರಡು ಸಭೆಯಲ್ಲಿ ರಾಕೇಶ್ ಭಾರ್ತಿ ಮಿತ್ತಲ್, ಪುನೀತ್ ದಾಲ್ಮಿಯಾ ಅವರ ಜೊತೆಗೂ ವಚ್ರ್ಯುವಲ್ ಸಭೆ ನಡೆಸಿದರಲ್ಲದೆ ಕರ್ನಾಟಕದಲ್ಲಿ ಹೂಡಿಕೆಗೆ ಆದ್ಯತೆ ನೀಡಿ ಎಂದರು.

-ಭಾರತಿ ಎಂಟರ್ಪ್ರೈಸಸ್ನ ರಾಕೇಶ್ ಮಿತ್ತಲ ಮಾತನಾಡಿ ಕರ್ನಾಟಕದಲ್ಲಿ 5 ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಭಾಗಗಳ ತಯಾರಿಕಾ ಘಟಕವನ್ನು ಸ್ಥಾಪಿಸಲು ಆಸಕ್ತಿ ಹೊಂದಿದೆ ಎಂದರು. ರಾಜ್ಯದಲ್ಲಿ ತಮ್ಮ ಸಂಸ್ಥೆ ಈಗಾಗಲೇ ಕೈಗೊಂಡಿರುವ ತರಬೇತಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಹೆಚ್ಚಿಸಲು ನೀಡುತ್ತಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

-ದಾಲ್ಮಿಯಾ ಸಮೂಹದ ಅಧ್ಯಕ್ಷರಾದ ಪುನೀತ್ ದಾಲ್ಮಿಯಾ ಮಾತನಾಡಿ ಈಗಾಗಲೇ ತಮ್ಮ ಸಂಸ್ಥೆ ಕರ್ನಾಟಕದ ಬೆಳಗಾವಿಯಲ್ಲಿ ಸಿಮೆಂಟ್ ಕಾರ್ಖಾನೆಗಳಿಗೆ 15 ಸಾವಿರ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದು, ಕಲಬುರ್ಗಿಯಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಲು 2 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲು ಉದ್ದೇಶಿದೆ ಎಂದರು.

-ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಈ ಸಂದರ್ಭದಲ್ಲಿ ಮಾತನಾಡಿ ಕೈಗಾರಿಕೆಗಳ ಅಭಿವೃದ್ಧಿಗೆ ಕಾಲಕ್ಕನುಗುಣವಾಗಿ ಸೂಕ್ತ ತಿದ್ದುಪಡಿಗಳೊಂದಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.

-ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೈಗಾರಿಕಾ ಇಲಾಖೆ ಪ್ರದಾನ ಕಾರ್ಯದರ್ಶಿ ಗೌರವ ಗುಪ್ತಾ ಉಪಸ್ಥಿತರಿದ್ದರು.

---------------

Chief Minister Encourages Dalmia and Bharti Enterprises to Invest in Karnataka

-Chief Minister B.S.Yediyurappa encouraged Dalmia Group and Bharti Enterprises to invest in Karnataka and said that Government of Karnataka is one of the top investor friendly States in the country.

-The Chief Minister participated virtually in the 7th National Forum of Public Affairs Forum of India (PAFI) and also held virtual meetings with Dalmia group and Bharti Enterprises, here today.

-Chief Minister B.S. Yediyurappa said that Karnataka Government is working to ensure that the lives and livelihood of citizens are protected and the investment climate of the State remains strong.

-He said that the Government of Karnataka looks forward to work with Bharti Enterprises to support growth opportunities for Bharti Enterprises in the State.

-Karnataka has recently announced the New Industry Policy with a special emphasis to make the State an integral part of the global supply chain across industry sectors. The Policy emphasizes on Advanced Manufacturing, R&D and Innovation and builds-up on Karnataka’s leadership position in the field of Innovation where we ranked No.1 in the country the CM stated.

-‘Measures have been taken make land procurement and labour compliances easier. We have ensured that any approved project can start the next day without waiting for any downstream approvals by suitable amendments to Karnataka Industrial (Facilitation) Act’ he said.

-Speaking with the Dalmia Bharat Group, the Chief Minister said that Dalmia’s cement plant in Belagavi is among the major cement producing facilities in India. Karnataka is proud to be home to Dalmia Bharat group and look forward to strengthening the relationship further, he said.

-Nisha Biswal , President, USIBC spoke about the strategies that can be adopted post pandemic in the wake of the amendments brought in Karnataka to boost the industrial sector to rebuild the economy, advocacy and public partnership. Considering that Karnataka has become a knowledge hub for India and recognizing that U.S.-India trade is increasingly driven by new business hubs, USIBC is also focused on strengthening connections between US and Karnataka, she said. She hoped that greater investments will be made in the US- India corridor in the coming days.

-Ajay Khanna, Forum Chairman & Co-founder, PAFI, Rahul Sharma, Past President & Founding Member, PAFI were present in the meeting.

-Rakesh Bharti Mittal, Vice Chairman, Bharti Enterprises said that Bharti Enterprises in interested in 5 (G) equipment manufacturing and also setting up of telecom manufacturing components in Karnataka.

-He elaborated on their telecom and electronics network in Karnataka and also spoke about their involvement in providing vocational training and Quality Support Program in Karnataka and in Government schools of Ramnagar.

-Puneet Dalmia, Chairman Dalmia Group said that Karnataka has been an integral part of Dalmia Group. The group has invested about 15,000 crores in the cement business in Karnataka. He said that Dalmia intends to invest about 2000 crores in the proposed cement plant in Kalaburgi.

-Jagadish Shettar, Minister for Industries and Commerce said that Government of Karnataka looks forward to work with you to support your growth plan in the State, said GOK aims to provide the best eco systems as well as subsidies and has enhanced ease of doing business, skilling subsidies to investors. He assured to extend all support.

-Gourav Gupta, Principal Secretary, Industries and Commerce Department, Gunjan Krishna, Commissioner, Department of Industries and Commerce Department were present in the meeting.

*************