ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಪ್ರವಾಹ ಪೀಡಿತ ಜಿಲ್ಲೆಗಳಿಗೆ ನೂತನ ಸಚಿವರು ಪ್ರವಾಸ ಕೈಗೊಳ್ಳಲು ಮುಖ್ಯಮಂತ್ರಿಗಳ ಸೂಚನೆ

know_the_cm

ವಿಧಾನಸೌಧ (ಬೆಂಗಳೂರು), ಆಗಸ್ಟ್ 20, 2019

-ನೂತನ ಸಚಿವರು, ಪ್ರವಾಹ ಪೀಡಿತ ಜಿಲ್ಲೆಗಳ ಪ್ರವಾಸ ಮತ್ತು ಪರಿಶೀಲನೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಂಪುಟ ವಿಸ್ತರಣೆಯ ನಂತರ ನಡೆದ ಔಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಿದರು.

-ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರ ನೋವಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸುವುದಲ್ಲದೆ ಪ್ರವಾಹದಿಂದ ತೀವ್ರ ತೊಂದರೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ವಿಚಾರ ವಿನಿಮಯ ಮಾಡಿ, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

-ಶೀಘ್ರದಲ್ಲಿಯೇ ಖಾತೆ ಹಂಚಿಕೆ ಮತ್ತು ಜಿಲ್ಲಾ ಉಸ್ತುವಾರಿಯ ಹೊಣೆಗಾರಿಕೆಯನ್ನು ನಿರ್ಧರಿಸಲಾಗುವುದು. ಅಷ್ಟರಲ್ಲಿ ಭೀಕರ ಪ್ರವಾಹ ಪರಿಸ್ಥಿತಿಗೆ ಒಳಗಾಗಿರುವ ಸಮಸ್ಯೆಗಳ ಅಧ್ಯಯನ ಕೈಗೊಂಡು ಪರಿಹಾರೋಪಾಯಗಳ ವರದಿ ಸಿದ್ಧಪಡಿಸಿ, ಮುಂದಿನ ಸಚಿವ ಸಂಪುಟ ಸಭೆಯೊಳಗೆ ಅನುಷ್ಠಾನಯೋಗ್ಯ ಕಾರ್ಯತಂತ್ರ ರೂಪಿಸುವಂತೆ ಎಲ್ಲ ಸಚಿವರಿಗೆ ಸೂಚಿಸಿದ ಮುಖ್ಯಮಂತ್ರಿಗಳು, ಕರ್ನಾಟಕವನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂಡಸ್ಪೂರ್ತಿಯೊಂದಿಗೆ ಕಾರ್ಯನಿರ್ವಹಿಸುವಂತೆ ಸಲಹೆ ಮಾಡಿದರು.

-ಪ್ರವಾಹಪೀಡಿತ ಜಿಲ್ಲೆಗಳ ಉಸ್ತುವಾರಿ:

1. ಬೆಳಗಾವಿ - ಲಕ್ಷಣ ಸವದಿ

2. ಚಿಕ್ಕೋಡಿ (ಬೆಳಗಾವಿ) - ಶಶಿಕಲಾ ಜೊಲ್ಲೆ

3. ಬಾಗಲಕೋಟೆ - ಕೆ.ಎಸ್.ಈಶ್ವರಪ್ಪ

4. ವಿಜಯಪುರ - ಗೋವಿಂದ ಕಾರಜೋಳ

5. ಹಾವೇರಿ - ಬಸವರಾಜ ಬೊಮ್ಮಾಯಿ

6. ಧಾರವಾಡ - ಜಗದೀಶ ಶೆಟ್ಟರ್

7. ಉತ್ತರ ಕನ್ನಡ - ಜಗದೀಶ ಶೆಟ್ಟರ್

8. ಗದಗ - ಸಿ. ಸಿ.ಪಾಟೀಲ್

9. ಕೊಪ್ಪಳ - ಸಿ. ಸಿ.ಪಾಟೀಲ್

10. ಬಳ್ಳಾರಿ - ಶ್ರೀರಾಮುಲು

11. ರಾಯಚೂರು - ಶ್ರೀರಾಮುಲು

12. ಯಾದಗಿರಿ - ಶ್ರೀರಾಮುಲು ಮತ್ತು ಪ್ರಭುಚೌಹಾಣ್

13. ಚಿಕ್ಕಮಗಳೂರು - ಸಿ.ಟಿ.ರವಿ

14. ಹಾಸನ - ಮಾಧುಸ್ವಾಮಿ

15. ಕೊಡಗು - ಎಸ್.ಸುರೇಶ್ ಕುಮಾರ್

16. ಮೈಸೂರು - ಆರ್.ಅಶೋಕ್

17. ಚಾಮರಾಜನಗರ - ವಿ.ಸೋಮಣ್ಣ

18. ದಕ್ಷಿಣ ಕನ್ನಡ - ಕೋಟ ಶ್ರೀನಿವಾಸ್ ಪೂಜಾರಿ

19. ಉಡುಪಿ - ಕೋಟ ಶ್ರೀನಿವಾಸ್ ಪೂಜಾರಿ

*************

know_the_cm

VidhnaSoudha(Bengalore), August 20, 2019

-Chief Minister B.S.Yediyurappa directs new Ministers to tour flood-affected districts.

-Chief Minister B.S.Yediyurappa directed the newly inducted Ministers to tour the flood-affected districts extensively for 2 days from tomorrow and provide relief to the flood victims.

-He was speaking at the formal cabinet meeting after the cabinet expansion here today.

-The Government’s first priority is to provide relief. The Chief Minister directed his cabinet colleagues to tour the districts and conduct review meetings at the District and Taluk levels. He also suggested that the ministers must visit the severely affected villages, meet the flood victims, listen to their grievances and submit a report.

-The Chief Minister said that the portfolios and the responsibility of the districts would be finalised shortly. Meanwhile, the ministers must immediately look into the problems caused by the inundation and submit a report on the relief measures before the next cabinet meeting, he stated. He directed that everyone must work with a team spirit to make Karnataka, a pioneer state in development.

-The ministers in charge of flood-affected districts:

1. Belagavi - Lakshmana Savadi

2. Chikkodi (Belagavi)- Shashikala Jolle

3. Bagalakote - K.S.Eeshwarappa

4. Vijayapura - Govinda Karjola

5. Haveri - Basavaraj Bommai

6. Dharwad - Jagadeesh Shettar

7. Uttara Kannada - Jagadeesh Shettar

8. Gadag - C.C.Patil

9. Koppala - C.C.Patil

10. Bellary - Sriramulu

11. Raichur - Sriramulu

12. Yadagir - Sriramulu and Prabhu Chowhan

13. Chikkamagalur - C.T.Ravi

14. Hassan - Madhu swamy

15. Kodagu - S.Suresh Kumar

16. Mysore - R.Ashok

17. Chamrajanagar - V.Sommanna

18. Dakshina Kannada - Kota Srinivas Poojari

19. Udupi - Kota Srinivas Poojari

*************