ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕೆ ಎಸ್ ಆರ್ ಟಿ ಸಿ ಗೆ ಅಂತರರಾಷ್ಟ್ರೀಯ ಪ್ರಶಸ್ತಿ: ಮುಖ್ಯಮಂತ್ರಿ ಅಭಿನಂದನೆ

know_the_cm

ವಿಧಾನಸೌಧ (ಬೆಂಗಳೂರು), ಆಗಸ್ಟ್ 19, 2019

-ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನಿಗಮದ ಉಪಕ್ರಮವಾದ "ಅಂಬಾರಿ ಡ್ರೀಮ್ ಕ್ಲಾಸ್- ಕನಸಿನೊಂದಿಗೆ ಪ್ರಯಾಣಿಸಿ" ಎಂಬ ಬ್ರಾಂಡಿಂಗ್ ಗೆ , CMO Asia Brand Excellence Award ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿರುವ ಬಗ್ಗೆ ಮಾಹಿತಿ ನೀಡಿದರು.

-ಇದೇ ಸಂದರ್ಭದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಬಸ್ಸಿನ ಸಮಗ್ರ ಮಾಹಿತಿಯುಳ್ಳ ಕೈಪಿಡಿಯೊಂದಿಗೆ ಬಸ್ಸಿನ ಸೇವೆ ಮತ್ತು ವಿಶಿಷ್ಟತೆಯನ್ನು ವಿವರಿಸಿದರು.

-ಸನ್ಮಾನ್ಯ ಮುಖ್ಯಮಂತ್ರಿ ಅವರು ಸಂತಸ ವ್ಯಕ್ತಪಡಿಸಿ, ಸಮಸ್ತ ಸಾರಿಗೆ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುವುದರೊಂದಿಗೆ, ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಇನ್ನೂ ಉತ್ತಮ ಸೇವೆ ಕಲ್ಪಿಸಲೆಂದು ಶುಭಾಶಯ ತಿಳಿಸಿದರು.

*************