ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕಾಮೇಗೌಡರ ಪರಿಸರ ಪ್ರೇಮವನ್ನು ಕೊಂಡಾಡಿದ ಮುಖ್ಯಮಂತ್ರಿ

know_the_cm

(ಬೆಂಗಳೂರು), ಜೂನ್ 28, 2020

-ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರದು ಅಪರೂಪದ ಪರಿಸರ ಕಾಳಜಿ. 80ರ ಇಳಿ ವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ಸಣ್ಣ ಕೆರೆಗಳನ್ನು ನಿರ್ಮಿಸುವ ಅವರ ನಡೆ ಅನುಕರಣೀಯ ಮತ್ತು ಅಭಿನಂದನಾರ್ಹವಾದುದು.

-ಕಾಮೇಗೌಡರು ಕುಂದಿನಿ ಬೆಟ್ಟದಲ್ಲಿ ನಿರ್ಮಿಸಿರುವ 14 ಕೆರೆಗಳೇ ಅವರ ನಿಸ್ವಾರ್ಥ ಪರಿಸರ ಕಾಳಜಿಯನ್ನು ಸಾರುತ್ತವೆ. ಈ ಕೆರೆಗಳಿಂದ ಬೆಟ್ಟದಲ್ಲಿ ಹಸಿರು ಸದಾ ಉಳಿದಿದೆ. ಗೌಡರು ತಮಗೆ ಸಿಕ್ಕ ಪ್ರಶಸ್ತಿಗಳ ಹಣವನ್ನೆಲ್ಲ ಕೆರೆಗಳ ನಿರ್ಮಾಣಕ್ಕೇ ಬಳಸುತ್ತಾ ಬಂದಿದ್ದಾರೆ. ಇಂತಹ ಅಪರೂಪದ ಪರಿಸರ ಕಾಳಜಿ ಮೆರೆಯುತ್ತಿರುವ ಗೌಡರಿಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದು ಹಾರೈಸೋಣ.

-ಕಾಮೇಗೌಡರ ಪರಿಸರ ಸೇವೆಯ ಬಗ್ಗೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್ ' ಕಾರ್ಯಕ್ರಮದಲ್ಲಿ ಉಲ್ಲೇಖಿಸಿ ಶ್ಲಾಘಿಸಿದ್ದಾರೆ. ಗೌಡರ ಪರಿಸರ ಪ್ರೇಮವನ್ನು ಕೊಂಡಾಡಿರುವ ಮಾನ್ಯ ಪ್ರಧಾನಿಯವರಿಗೆ ಧನ್ಯವಾದಗಳು.

*************