ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರೈತ ಮಹಿಳೆಗೆ ಮುಖ್ಯಮಂತ್ರಿಗಳ ಅಭಯ

know_the_cm

(ಬೆಂಗಳೂರು), ಏಪ್ರಿಲ್ 28, 2020

-ಚಿತ್ರದುರ್ಗ ಜಿಲ್ಲೆಯ ರೈತ ಮಹಿಳೆ ವಸಂತಾ ಅವರು, ಈರುಳ್ಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ಸಾಮಾಜಿಕ ಜಾಲಾತಾಣದಲ್ಲಿ ಅಳಲು ತೋಡಿಕೊಂಡಿದ್ದರು.

-ಮಹಿಳೆಯ ವೀಡಿಯೋ ವೀಕ್ಷಿಸಿದ ಮಾನ್ಯ ಮುಖ್ಯಮಂತ್ರಿಗಳು, ಅವರಿಗೆ ಕರೆ ಮಾಡಿ ವಿವರ ಪಡೆದರು.

-ರೈತರ ಅನುಕೊಲಕ್ಕಾಗಿ ಸರ್ಕಾರ ಅನೇಕ ಉತ್ತಮ ಕ್ರಮಗಳನ್ನು ಕೈಗೊಂಡಿದ್ದರೂ ಮಧ್ಯವರ್ತಿಗಳಿಂದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರೈತ ಮಹಿಳೆ ಸಮಸ್ಯೆಗಳನ್ನು ಹೇಳಿಕೊಂಡರು.

-ವಸಂತಾ ಅವರ ಜಾಣತನವನ್ನು ಮೆಚ್ಚಿಕೊಂಡ ಮುಖ್ಯಮಂತ್ರಿಗಳು, ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವುದಾಗಿ ಧೈರ್ಯ ತುಂಬಿದರು.

-ನಂತರ ಜಿಲ್ಲಾಧಿಕಾರಿ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಕೂಡಲೇ ಆ ಹಳ್ಳಿಗೆ ಭೇಟಿ ನೀಡಿ ರೈತ ಮಹಿಳೆಯ ಕಷ್ಟ ಆಲಿಸುವಂತೆ ಸೂಚನೆ ನೀಡಿದರಲ್ಲದೆ, ರೈತರು ಈರುಳ್ಳಿ ಮತ್ತು ಇತರ ಬೆಳೆಗಳಿಂದ ತೊಂದರೆಗೀಡಾಗಿದ್ದರೆ ಕೂಡಲೇ ಸರ್ಕಾರದ ವತಿಯಿಂದ ಖರೀದಿ ಮಾಡುವಂತೆ ಸೂಚಿಸಿದರು.

*************