ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಹುಟ್ಟುಹಬ್ಬ ಆಚರಣೆಗೆ ದುಂದುವೆಚ್ಚ ಬೇಡ: ಅಭಿಮಾನಿಗಳಲ್ಲಿ ಮುಖ್ಯಮಂತ್ರಿ ಮನವಿ

know_the_cm

(ಬೆಂಗಳೂರು), ಫೆಬ್ರವರಿ 26, 2020

-ನಾಳೆ, ದಿನಾಂಕ 27-2-2020ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದದಲ್ಲಿ ಭೇಟಿಯಾಗುವ ಅಭಿಮಾನಿಗಳು, ಹಾರ, ತುರಾಯಿ, ಉಡುಗೊರೆ ಸಲ್ಲಿಸುವುದಾಗಲಿ, ಪಟಾಕಿ ಸಿಡಿಸುವುದಾಗಲಿ ಇನ್ನಿತರ ದುಂದುವೆಚ್ಚ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.

-ಅಭಿಮಾನಿಗಳ ಶುಭಹಾರೈಕೆಗಿಂತ ದೊಡ್ಡ ಉಡುಗೊರೆ ಯಾವುದೂ ಇಲ್ಲ ಎಂದಿರುವ ಮುಖ್ಯಮಂತ್ರಿಗಳು, ಯಾರೂ ತಮ್ಮ ಹುಟ್ಟುಹಬ್ಬದ ಆಚರಣೆ ನಿಮಿತ್ತ ದುಂದುವೆಚ್ಚಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದ್ದಾರೆ.

*************