ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ತ್ಯಾಜ್ಯ ಸುರಿಯುವವರ ಮೇಲೆ ಕಾನೂನು ಕ್ರಮ: ಕೇರಳ ಮುಖ್ಯಮಂತ್ರಿಗೆ ಧನ್ಯವಾದ ಸಲ್ಲಿಸಿದ ಮುಖ್ಯಮಂತ್ರಿ

know_the_cm

(ಬೆಂಗಳೂರು), ಫೆಬ್ರವರಿ 17, 2020

-ಕೇರಳದ ಗಡಿಯಲ್ಲಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಕೇರಳದಿಂದ ವೈದ್ಯಕೀಯ ಹಾಗೂ ಜೈವಿಕ ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇರಳ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

-ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಕೇರಳದ ಗಡಿಯಲ್ಲಿರುವ ರಾಜ್ಯದ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ವೈದ್ಯಕೀಯ ಹಾಗೂ ಜೈವಿಕ ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಮೂಲಕ, ಈ ಸಮಸ್ಯೆಗೆ ಕ್ಷಿಪ್ರವಾಗಿ ಸ್ಪಂದಿಸಿದ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿಗೆ ಕೃತಜ್ಞತೆ ಸಲ್ಲಿಸಬಯಸುತ್ತೇನೆ.

-ಕೆಲವು ಮಾಧ್ಯಮಗಳಲ್ಲಿ ಕೇರಳದಿಂದ ಗಡಿಯಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ ಎನ್ನುವ ಕುರಿತಾಗಿ ಬಂದಿರುವ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

-ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ವಸ್ತುಸ್ಥಿತಿಯನ್ನು ಅರಿತು, ನೆರೆಯ ರಾಜ್ಯದಿಂದ ನಮ್ಮ ರಾಜ್ಯದಲ್ಲಿ ತ್ಯಾಜ್ಯ ಸುರಿಯುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇನೆ. ಈ ಜೈವಿಕ-ವೈದ್ಯಕೀಯ ತ್ಯಾಜ್ಯಗಳನ್ನು ಬೆಲ್ಲ ತಯಾರಿಕೆಯಲ್ಲಿ ಇಂಧನವಾಗಿ ಬಳಕೆ ಮಾಡುವುದನ್ನು ತಡೆಗಟ್ಟುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ.” ಎಂದು ತಿಳಿಸಿದ್ದಾರೆ.

-ಶೀಘ್ರವೇ ಈ ಅಕ್ರಮವನ್ನು ತಡೆಯಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

----------------------------------------------------------

(Bengaluru), February 17, 2020

Chief Minister thanks Kerala CM for taking legal action against garbage dumpers

-Chief Minister Shri B S Yediyurappa thanked his counter part of Kerala for initiating action against those dumping bio-medical and bio-wastes in Karnataka's districts neighboring Kerala.

-In his statement he said, “First I thank the Kerala Chief minister Shri Pinarayi Vijayan for his prompt reaction and response to initiate legal action against the dumpers of bio-medical and bio-waste in our districts neighbouring Kerala.

-We have taken serious note of reports in a section of press on alleged dumping of bio-medical waste and bio-waste by people from Kerala in bordering Mysuru, Kodagu and Chamarajnagar districts.

-I have directed deputy commissioners of concerned districts, environment department and pollution control board to take stock of the situation and check surreptitious activities of individuals and agencies from Kerala who are indulging in this illegal activity. I have also directed the officials to prevent the use of this bio-medical waste by Jaggery units as fuel.”

-He assured that soon this activity will be checked and ended.

*************