ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಿತಿ 20 ಕ್ವಿಂಟಾಲ್ ಗೆ ಹೆಚ್ಚಳ: ಮುಖ್ಯಮಂತ್ರಿ ಘೋಷಣೆ

know_the_cm

(ಬೆಂಗಳೂರು), ಫೆಬ್ರವರಿ 07, 2020

-ಬೆಂಬಲ ಬೆಲೆಯಲ್ಲಿ ಖರೀದಿಸುವ ತೊಗರಿಯ ಮಿತಿಯನ್ನು 10ರಿಂದ 20 ಕ್ವಿಂಟಾಲ್ ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ಘೋಷಿಸಿದ್ದಾರೆ.

-ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪಶು ಮೇಳ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ರೈತರು ಬೆಂಬಲ ಬೆಲೆಯಲ್ಲಿ ಖರೀದಿಸುವ ತೊಗರಿಯ ಮಿತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದು, ರೈತರ ಹಿತರಕ್ಷಣೆಗೆ ಹಾಗೂ ಆದಾಯ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದೆ. ಆದ್ದರಿಂದ ಈ ಮಿತಿಯನ್ನು 20 ಕ್ವಿಂಟಾಲ್ ಗಳಿಗೆ ಹೆಚ್ಚಿಸಲು ಕೂಡಲೇ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

-ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಹರ್ಷ ವ್ಯಕ್ತ ಪಡಿಸಿದ ರೈತ ಮುಖಂಡರು, ಸ್ಥಳದಲ್ಲೇ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

----------------------------------------------------------

(Bengaluru), February 07, 2020

Limit of purchase of Tur Dal doubled to 20 quintal - Chief Minister

-Chief Minister Shri B S Yediyurappa announced here today that the limit of purchase of tur dal under minimum support price would be enhanced from 10 quintal to 20 quintal with immediate effect.

-He made this announcement during the inaugural address at Pashumela here.

-Responding to the appeal from Farmers, he said, the Government is committed to protect the interest of the farmers and to enhance their income. Therefore he assured to direct the officers to take immediate steps to enhance purchase limit under MSP.

-Farmers cheered on this announcement and felicitated Chief Minister on the spot to express their gratitude.

*************