ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಜನಸ್ನೇಹಿ ಬಜೆಟ್: ಮುಖ್ಯಮಂತ್ರಿ ಪ್ರತಿಕ್ರಿಯೆ

know_the_cm

(ಬೆಂಗಳೂರು), ಫೆಬ್ರವರಿ 01, 2020

-ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2020-2021ನೇ ಸಾಲಿನ ಆಯವ್ಯಯ ಜನಸ್ನೇಹಿಯಾಗಿದ್ದು, ಕೃಷಿಕರು, ಬಡವರ ಪರವಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

-ಜನಸ್ನೇಹಿ ಬಜೆಟ್ ಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ.

-“ಮೊದಲ ಬಾರಿಗೆ ದೇಶದ ಇತಿಹಾಸದಲ್ಲಿ ರೈತರಿಗೆ, ಬಡವರಿಗೆ ಮತ್ತು ಹಳ್ಳಿಗಳಿಗೆ ಇಷ್ಟೊಂದು ಆದ್ಯತೆ ನೀಡಿದ ಆಯವ್ಯಯ ಎಂದೂ ಬಂದಿಲ್ಲ. ರೈತರಿಗೆ ಈ ಆಯವ್ಯಯ ವರದಾನವಾಗಲಿದೆ. 2022ರಲ್ಲಿ ರೈತರ ಆದಾಯ ದ್ವಿಗುಣ ಮಾಡುವ ಗುರಿ ಸಾಧನೆಗೆ ಈ ಆಯವ್ಯಯದಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಪೂರಕವಾಗಿವೆ. ವಿದ್ಯುತ್ ಸ್ವಾವಲಂಬನೆ ನಿಟ್ಟಿನಲ್ಲಿ ಬಂಜರು ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ, 20 ಲಕ್ಷ ರೈತರಿಗೆ ಸೌರ ಪಂಪ್ಸೆಟ್ಗಳನ್ನು ಒದಗಿಸಲು ನೆರವು, 100 ಜಲಕ್ಷಾಮ ಜಿಲ್ಲೆಗಳಲ್ಲಿ ವಿಶೇಷ ಯೋಜನೆ ರೈತರಿಗೆ ಅನುಕೂಲವಾಗಲಿದೆ. ಜಮೀನುಗಳಲ್ಲಿ ರೈತರು ರಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡುವುದು ಮೊದಲಾದ ಕಾರ್ಯಕ್ರಮಗಳು ಕೃಷಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ. ಕೃಷಿ ಉತ್ಪನ್ನಗಳ ಸಾಗಾಣಿಕೆ ಮತ್ತು ರಫ್ತು ಮಾಡಲು ಕಿಸಾನ್ ರೈಲ್, ಕಿಸಾನ್ ಉಡಾನ್ ಯೋಜನೆ ಸಹಾಯಕವಾಗಲಿದೆ. 2.83 ಲಕ್ಷ ಕೋಟಿ ದೊಡ್ಡ ಬಜೆಟ್ ನಲ್ಲಿ ಕೃಷಿಗೆ ಆದ್ಯತೆಯನ್ನು ಎತ್ತಿ ತೋರಿಸಲಾಗಿದೆ.

-ಕ್ಷಯ ರೋಗ ನಿವಾರಣೆ, ಜನ ಔಷಧಿ ಕೇಂದ್ರಗಳ ವಿಸ್ತರಣೆ, ಆರೋಗ್ಯ ಸೇವೆ ಸುಧಾರಣೆಗೆ ಆದ್ಯತೆ, ವೈದ್ಯಕೀಯ ಶಿಕ್ಷಣಕ್ಕೆ ಒತ್ತು ನೀಡಿರುವುದು ಶ್ಲಾಘನೀಯ. ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ವಿದೇಶಿ ಸಾಲ ಪಡೆಯಲು ಅನುಮತಿ ದೊರೆತಿರುವುದು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬಹಳ ಅನುಕೂಲವಾಗಲಿದೆ. ಅಲ್ಲದೆ ಆನ್ಲೈನ್ ಶಿಕ್ಷಣ ವ್ಯವಸ್ಥೆಯನ್ನು ಘೋಷಿಸಿರುವುದು ಒಂದು ಮಹತ್ವಪೂರ್ಣ ಬೆಳವಣಿಗೆಯಾಗಿದೆ.

-ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಜನೆಗೆ ಪೂರಕ ಆಯವ್ಯಯ ಇದಾಗಿದ್ದು, ಮಾನವ ಸಂಪನ್ಮೂಲ ಬಳಕೆಗೆ ಉತ್ತೇಜನಕಾರಿಯಾಗಿದೆ. ಉತ್ಪಾದನಾ ವಲಯ, ರಫ್ತಿಗೆ ಉತ್ತೇಜನ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಒದಗಿಸಿರುವುದು ಹೂಡಿಕೆದಾರರಿಗೆ ಉತ್ತಮ ಸಂದೇಶ ನೀಡಿದೆ.

-18600 ಕೋಟಿ ರೂ. ಅಂದಾಜು ವೆಚ್ಚದ ಬೆಂಗಳೂರು ಸಬರ್ಬನ್ ರೈಲಿಗೆ ಅನುಮೋದನೆ ನೀಡಿದ್ದು. ಭಾರತ ಸರ್ಕಾರದ ಶೇ. 20 ಪಾಲು, ರಾಜ್ಯ ಸರ್ಕಾರದ ಶೇ. 20 ಪಾಲು ಹಾಗೂ ಶೇ. 60ರ ಬಾಹ್ಯ ನೆರವಿನ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದ್ದು, ರಾಜಧಾನಿಯ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಹಳ ಅನುಕೂಲವಾಗಿದೆ.

-ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ ಇಳಿಕೆ, ತೆರಿಗೆದಾರರಿಗೆ ಕಿರುಕುಳ ತಡೆಯುವ ನಿಟ್ಟಿನಲ್ಲಿ 'tax payers charter' ಕೇಂದ್ರದ ಮಹತ್ವಪೂರ್ಣ ಕ್ರಮಗಳು ಎಂದು ಅಭಿಪ್ರಾಯಪಟ್ಟಿರುವ ಮುಖ್ಯಮಂತ್ರಿಗಳು, ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ನಾನ್ ಗಜೆಟೆಡ್ ಹುದ್ದೆಗಳ ನೇಮಕಾತಿಯನ್ನು ಸರಳಗೊಳಿಸುವ ಕೇಂದ್ರದ ತೀರ್ಮಾನವೂ ಸ್ವಾಗತಾರ್ಹ” ಎಂದು ಬಣ್ಣಿಸಿದ್ದಾರೆ.

----------------------------------------------------------

(Bengaluru), February 01, 2020

It’s a pro-people budget: Chief Minister

-Chief Minister B.S. Yediyurappa has described the Union budget presented by Finance Minister Smt. Nirmala Sitharaman as pro-people, pro-farmer and pro-poor.

-Reacting about the budget presented by Union Finance Minister today, he congratulated Prime Minister Narendra Modi and Finance Minister Nirmala Sitaraman for giving such a pro-people budget.

-For the first time in the history of the country, priority has been given to farmers, poor and rural areas. This is a boon to the farmers.

-The programmes announced for the farming sector compliment the Prime Minister’s vision to double the income of farmers.

-First time Union Government has discussed about agriculture in detail in the budget, this meant, the Prime minister has decided to restore the glory of Our Indian agriculture system.

-Providing Rs 2 lakh 83 thousand crore to agriculture sector is a major deviation from the routine budgetary allocations.

-Kisan Rail and Kisan Udan will facilitate speedy transportation and export of perishable agriculture products and this in turn will boost farmers income.

-Water conservation measures in 100 water stressed districts, which form one fifth of the country area will help the farmers in water starved districts where underground water has almost exhausted.

-Encouraging production of solar energy and PM-KUSUM , the scheme of energizing pumpsets through solar energy will help more than 20 lakh farmers.

-Implementation of scheme to provide skill training in” Desi skills” will boost the small and cottage indusrties under MSME scheme.

-Allowing FDI ( Foreign direct investment) in education sector will boost academic activities in fund starved universities all over the country. This is a good step to improve quality fo education in the country.

-I also thank the finance minister and centre for giving approval for Sub Urban Rail system for Bengaluru where the centre and state will share 40 percent equity and 60 percent from external assistance.

-This will boost the infrastructure facilities in Bengaluru which has turned to be favorite investment destination for the MNCs . This will help us to eliminate traffic congestion in this investment friendly city.

-Tax payers’ chart will be a great step in eliminating harassment tax payers.

-Reduction in individual tax and corporate tax and simplification of tax system is a great relief”, he said in the press release.

*************