ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕರ್ನಾಟಕವನ್ನು ವೃದ್ಧಿ ಮತ್ತು ಅಭಿವೃದ್ಧಿಯ ಶಕ್ತಿಕೇಂದ್ರವಾಗಿಸಲು ಬದ್ಧ: ಮುಖ್ಯಮಂತ್ರಿ

know_the_cm

(ದಾವೊಸ್, ಸ್ವಿಟ್ಜರ್ಲ್ಯಾಂಡ್), ಜನವರಿ 23, 2020

-ಮುಂದಿನ ಮೂರು ವರ್ಷಗಳಲ್ಲಿ ಕರ್ನಾಟಕವನ್ನು ವೃದ್ಧಿ ಮತ್ತು ಅಭಿವೃದ್ಧಿಯ ಶಕ್ತಿ ಕೇಂದ್ರವಾಗಿ ರೂಪಿಸಲು ಬದ್ಧರಿರುವುದಾಗಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

-ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದ ಸಂದರ್ಭದಲ್ಲಿ, ಜನವರಿ 22 ರಂದು ಏರ್ಪಡಿಸಿದ್ದ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನವೆಂಬರ್ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಉದ್ಯಮಿಗಳು ಹಾಗೂ ಹೂಡಿಕೆದಾರರಲ್ಲಿ ಮನವಿ ಮಾಡಿದರು. ಕೈಗಾರಿಕೋದ್ಯಮ ವಲಯದ ಪ್ರಮುಖರೆಲ್ಲರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

-ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕರ್ನಾಟಕ ರಾಜ್ಯವು ಇನ್ಫೋಸಿಸ್, ಬಯೋಕಾನ್, ವಿಪ್ರೊ ಮತ್ತು ಡೈನಮ್ಯಾಟಿಕ್ಸ್ ನಂತಹ ಭಾರತೀಯ ಮೂಲದ ಬಹುರಾಷ್ಟ್ರೀಯ ಕಂಪೆನಿಗಳ ನೆಲೆಯಾಗಿದೆ. ರಾಜ್ಯವು ಉತ್ತಮ ಬೆಳವಣಿಗೆ ದರವನ್ನು ಹಿಂದಿನಿಂದಲೂ ದಾಖಲಿಸುತ್ತ ಬಂದಿದ್ದು, ಇದು ರಾಷ್ಟ್ರೀಯ ಬೆಳವಣಿಗೆ ದರಕ್ಕಿಂದ ಹೆಚ್ಚಾಗಿದೆ. ಜೊತೆಗೆ ರಾಜ್ಯದ ನಿರುದ್ಯೋಗ ಪ್ರಮಾಣವೂ ಅತಿ ಕಡಿಮೆಯಿದೆ ಎಂದು ವಿವರಿಸಿದರು.

-ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ವಹಿವಾಟು ನಡೆಸಲು ಇರುವ ತೊಡಕುಗಳನ್ನು ನಿವಾರಿಸುತ್ತಾ ಹೂಡಿಕೆಗೆ ಉತ್ತಮ ವಾತಾವರಣ ಸೃಷ್ಟಿಸಲು ನೆರವಾಗುತ್ತಿದೆ.

-ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾರಿಕೆಯ ಅಭಿವೃದ್ಧಿಯ ಮೂಲಕ 21ನೇ ಶತಮಾನದಲ್ಲಿ ನವ ಭಾರತ ನಿರ್ಮಾಣ ಮಾಡಲು ನಮ್ಮನ್ನು ಸದಾ ಹುರಿದುಂಬಿಸುತ್ತಿದ್ದಾರೆ. ಕೈಗಾರಿಕೆಗಳ ಆಶಾದಾಯಕ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಉತ್ಪಾದಕತೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿನ ಹೂಡಿಕೆಗೆ ಉತ್ತೇಜನ ನೀಡುವ ಹೊಸ ಕೈಗಾರಿಕಾ ನೀತಿಯನ್ನು ರೂಪಿಸುತ್ತಿದ್ದೇವೆ ಎಂದು ವಿವರಿಸಿದರು.

-ಉದ್ಯಮ ವಲಯದ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ಬೆಂಗಳೂರಿನಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಫೆಬ್ರುವರಿಯಲ್ಲಿ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

-ರಾಜ್ಯದಲ್ಲಿ ಸುಸ್ಥಿರ ಉತ್ಪಾದನಾ ವಲಯ ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಎರಡು ಹಾಗೂ ಮೂರನೇ ಹಂತದ ನಗರಗಳಿಗೆ ಸಂಪರ್ಕವನ್ನು ಸುಧಾರಿಸಲಾಗಿದೆ; ಭೂ ಬ್ಯಾಂಕ್ ಸೃಷ್ಟಿಸಲಾಗಿದೆ. ಆ ಮೂಲಕ ಕರ್ನಾಟಕದ ಬೆಳವಣಿಯ ವೇಗ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ನುಡಿದರು.

-ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯವು ಉತ್ಪನ್ನ ಆಧಾರಿತ ಕೈಗಾರಿಕಾ ಕ್ಲಸ್ಟರುಗಳ ಅಭಿವೃದ್ಧಿಗೆ ಕ್ರಮ ವಹಿಸುತ್ತಿದೆ. ಆ ಮೂಲಕ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

-ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಅವರು ಮಾತನಾಡಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ, ಆ ಮೂಲಕ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯಾಗಿ ರೂಪಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ .ಕನಸನ್ನು ನನಸಾಗಿಸುವಂತೆ ಉದ್ಯಮಿಗಳಿಗೆ ಮನವಿ ಮಾಡಿದರು. “ನೀವು ನಿಮ್ಮ ಉದ್ಯಮವನ್ನು ಭಾರತದ ಎಲ್ಲ ಭಾಗಗಳಲ್ಲಿ ವಿಸ್ತರಿಸಿ, ವಿಶೇಷವಾಗಿ ಕೈಗಾರಿಕೆಗಳಿಗೆ ಪೂರಕ ವಾತಾವರಣವಿರುವ ಕರ್ನಾಟಕದಲ್ಲಿ” ಎಂದು ಅವರು ನುಡಿದರು.

-ಸಿಐಐ ಅಧ್ಯಕ್ಷ ಹಾಗೂ ಟಯೊಟಾ ಕಿರ್ಲೋಸ್ಕರ್ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಕಿರ್ಲೋಸ್ಕರ್ ಅವರು ಮಾತನಾಡಿದರು. ಮಹೀಂದ್ರ ಗ್ರೂಪ್ ನ ಆನಂದ್ ಮಹೀಂದ್ರ, ಭಾರತ್ ಫೋರ್ಜ್ ನ ಬಾಬಾ ಕಲ್ಯಾಣಿ ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಸಹ ಉಪಸ್ಥಿತರಿದ್ದರು.

-ಸಭೆಗೆ ಮುನ್ನ ಕರ್ನಾಟಕದ ಕೈಗಾರಿಕೆಗಳ ಒಟ್ಟಾರೆ ಸ್ಥಿತಿಗತಿ ಮತ್ತು ಕರ್ನಾಟಕದ ಆರ್ಥಿಕತೆ ಹಾಗೂ ಹೆಚ್ಚಿನ ಹೂಡಿಕೆಯ ಹೊಣೆಗಾರಿಕೆಯನ್ನು ನಿಭಾಯಿಸಲು ಸರ್ಕಾರದ ಪೂರ್ವಸಿದ್ಧತೆಯ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

-ಕರ್ನಾಟಕ ರಾಜ್ಯ ಮಾತ್ರ ಹೂಡಿಕೆದಾರರೊಂದಿಗೆ ಪ್ರತ್ಯೇಕ ಚರ್ಚೆ ನಡೆಸುವ ಬದಲು ಹೂಡಿಕೆದಾರರ ಸಮಾವೇಶದ ಕರ್ಟನ್ ರೈಸರ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕರ್ಟನ್ ರೈಸರ್ ಕಾರ್ಯಕ್ರಮದಿಂದಾಗಿ ಹೂಡಿಕೆದಾರರು, ರಾಜ್ಯದಲ್ಲಿ ಹೂಡಿಕೆ ಮಾಡುವ ಕುರಿತು ಸಿದ್ಧತೆ ನಡೆಸಿಕೊಂಡು, ಸಮಾವೇಶದಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಅಭಿಪ್ರಾಯಪಟ್ಟರು.

----------------------------------------------------------

know_the_cm

(Davos, Switzerland), January 23, 2020

Karnataka will be the Powerhouse of Growth and Development - Chief Minister

-Inviting the entrepreneurs and investors to participate in the scheduled Global Investors Meet(GIM )in November at Bengaluru palace grounds , chief minister B S Yediyurappa said he is committed to make Karnataka the power house of growth and development in the next three years.

-He was speaking at the curtain raiser programme of GIM organized here last night as a part of WEF meetings , which was attended by who’s who of the world’s industrial sector.

-Inaugurating the meet , Yediyurappa said Karnataka has a history of robust growth rate and it is higher than the country’s growth rate of seven. “ At the same time the state has a lowest unemployment rate” he pointed out and said Karnataka is proud of having home grown MNCs such as Infosys, Bicon Wipro and Dynamatics.

-Chief minister said union government is closely working with the state and helping it to identify the constraints in doing business and improving over all business environment.

-“ Our prime minister Narendra Modi is constantly inspiring us to be part of Industrial development to build a New India of 21 century: he said promising an encouraging climate for the industries to grow. “ we are coming out with new Industrial policy that incentivizes productivity , regional development and investment into research development” he said.

-Addressing the business leaders, State industries minister Jagadish Shettar said as a prelude to this GIM, “ we have scheduled an investors meet in Hubballi in February where we prepare ourselves for the mega event”.

-“Land banks have been created, regional connectivity has been improved around tie 2 and tier 3 cities in the state with a vision for sustainable manufacturing glory, let us strive to place Karnataka on a high growth path “ he said.

-Shettar said to increase the production capacity of the industries state is initiating a product based industrial cluster development programme which will explore the industrial potential of the regions and districts.

-Union minister Piyush Goel in his address appealed the investors to make their investments in Karnataka which in turn will contribute to prime minister Narendra Modi’s vision of India’s five trillion economy. “ You spread your tentacles to all parts of India, especially Karnataka which has a robust and congenial industrial atmosphere” he said.

-Vikram Kirlosker President CII and Managing Director of Toyata Kirlosker also spoke on the occasion. Including Anand Mahindra of Mahindra group, Baba Kalyani of Bharat Forge and Chief secretary T M Vijaybhasker attended the meeting.

-Before the meeting the industrialists and investors were presented the overall industrial situation and the economy of Karnataka and state’s readiness to take the additional responsibility of the investments.

-It was only Karnataka which planned a curtain raiser for it’s GIM at Bengaluru instead of holding one to one with the investors . Chief secretary T M Vijaybhasker said this curtain raiser exercise will provide the time for the investors to plan accordingly and participate in the meeting.

*************