ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಡೊನಾಲ್ಡ್ ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳು

know_the_cm

(ದಾವೊಸ್, ಸ್ವಿಟ್ಜರ್ಲ್ಯಾಂಡ್), ಜನವರಿ 21, 2020

-ಸ್ವಿಟ್ಜರ್ಲೆಂಡಿನ ದಾವೊಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದ ಮೊದಲ ದಿನವಾದ ಇಂದು ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಸಮಾವೇಶದ ಅತ್ಯಂತ ಮಹತ್ವದ ಕಾರ್ಯಕ್ರಮವಾದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

-ರಾಜ್ಯದ ಮುಖ್ಯಮಂತ್ರಿಯೊಬ್ಬರು ಅಮೆರಿಕಾ ಅಧ್ಯಕ್ಷರ ಭಾಷಣದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

-ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಅವರನ್ನು ಒಳಗೊಂಡಂತೆ ಪೂರ್ಣ ಪ್ರಮಾಣದ ನಿಯೋಗದೊಂದಿಗೆ ಪಾಲ್ಗೊಂಡ ಮೊದಲ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು.

-2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಆ ಸಂದರ್ಭದಲ್ಲಿ ಅಮೆರಿಕಾ ಸರ್ಕಾರದ ಕಾರ್ಯದರ್ಶಿ ಸಮಾವೇಶದಲ್ಲಿ ಭಾಗವಹಿಸಿದ್ದರು.

-ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯೆಲ್, ಕೇಂದ್ರ ಹಡಗು ಸಾರಿಗೆ ಖಾತೆ ರಾಜ್ಯ ಸಚಿವ ಮನ್ ಸುಖ್ ಮಾಂಡವೀಯ ಅವರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-ಸಭೆಯ ನಂತರ ಟ್ರಂಪ್ ಅವರ ಭಾಷಣದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ಟ್ರಂಪ್ ಅವರ ಭಾಷಣ, ಸರಿಯಾದ ದಿಕ್ಕಿನಲ್ಲಿದ್ದರೂ, ತಮ್ಮ ದೇಶದ ಆರ್ಥಿಕತೆ ಕುರಿತು ಅವರು ಗಮನ ಕೇಂದ್ರೀಕರಿಸಿದರು. ಆದರೆ ಯಾವುದೇ ದೇಶದ ನಾಯಕನ ದೃಷ್ಟಿಯಿಂದ ಇದು ಸಹಜ” ಎಂದರಲ್ಲದೆ, ಟ್ರಂಪ್ ಅವರು, ವರ್ಲ್ಡ್ ಎಕನಾಮಿಕ್ ಫೋರಂ ಹೂಡಿಕೆದಾರರು ಹಾಗೂ ವ್ಯಾಪಾರಸ್ಥರಿಗೆ ತಮ್ಮ ವಹಿವಾಟು ವಿಸ್ತರಿಸಲು ವೇದಿಕೆಯಾಗಿದೆ. ಅಂತೆಯೇ ರಾಜಕೀಯ ನಾಯಕರಿಗೆ ತಮ್ಮ ರಾಜ್ಯ ಮತ್ತು ದೇಶಕ್ಕೆ ಹೂಡಿಕೆದಾರರನ್ನು ಆಹ್ವಾನಿಸುವ ಮೂಲಕ ತಮ್ಮ ದೇಶದ ಆರ್ಥಿಕತೆ ವೃದ್ಧಿಸಲು ಉತ್ತಮ ಅವಕಾಶವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಇಂತಹ ವೇದಿಕೆಗಳು ತಮ್ಮದೇ ಸಂಪನ್ಮೂಲ ಹೊಂದಿಸಲು ಅಡಚಣೆ ಇರುವ ರಾಜ್ಯಗಳಿಗೆ ಅತ್ಯಂತ ಅಗತ್ಯ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

-ಹೂಡಿಕೆಗಳು ರಾಜ್ಯದ ಆರ್ಥಿಕತೆ ವೃದ್ಧಿಸುವ ಜೊತೆಗೆ ಯುವಕರಿಗೆ ಉದ್ಯೋಗ ಒದಗಿಸುತ್ತವೆ. ಉದ್ಯೋಗ ಸೃಷ್ಟಿಯ ಗುರಿ ಈಡೇರಲು ಹೂಡಿಕೆಯ ಅಗತ್ಯವಿದೆ. ಇಂತಹ ಅವಕಾಶಗಳು ರಾಜ್ಯದ ಆರ್ಥಿಕತೆ ವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಕೇವಲ ಎರಡು-ಮೂರು ಸಾವಿರ ಜನಸಂಖ್ಯೆಯ ಈ ಪುಟ್ಟ ಗ್ರಾಮದಲ್ಲಿ ಮೈನಸ್ 9 ಡಿಗ್ರಿ ಸೆಲ್ಸಿಯಸ್ ಚಳಿಯನ್ನೂ ಲೆಕ್ಕಿಸದೆ ಮುಖ್ಯಮಂತ್ರಿಗಳು ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಉತ್ಸಾಹದಿಂದ ಸರಣಿ ಸಭೆಗಳನ್ನು ನಡೆಸುತ್ತಿರುವುದು ಇತರರಿಗೆ ಅಚ್ಚರಿದಾಯಕವಾಗಿತ್ತು.

---------------

know_the_cm

(Davos, Switzerland), January 21, 2020

CM attends US President's Address at WEF

-It was a different event, undoubtedly a big one. Chief Minister Shri B S Yediyurappa created the record of sorts for Karnataka by attending US President Donald Trump’s address which is described as the mega event of the year at the WEF. It is first time state chief minister had an occasion to hear the US president’s address.

-Yediyurappa is the first chief minister of Karnataka to participate in WEF meet with a full contingent of officials including chief secretary T M Vijaybhasker and Industries minister Jagadish Shettar. In 2003 it was S M Krishna attended the WEF meeting, but then WEF was attended US secretary of state.

-Along with Yediyurappa, union minister for commerce and industry Piyush Goyal and Mansukh Mandaviya Union Minister of state for shipping also attended the meet addressed by Trump.

-After coming out of the meeting, the chief minister said though Trump’s speech was in the right direction, he concentrated more on his country’s economy. “It is natural for any country head to speak about his country and its economy,” he felt, adding that Trump was very much appreciative of the WEF which has turned into a platform for the global traders and investors to boost their business activities. “It is also a platform for the political leaders to invite and attract investments to boost the economy of respective states and countries” Chief minister opined, adding that such forums are the need of the hour particularly when states are facing trouble in mobilizing resources on their own.

-"Investments will not only boost the state’s economy, they will also provide jobs to our youths” he said. "Our aim is to create jobs, and to create jobs we need investments” he claimed and said such occasions will come to the rescue of Karnataka’s economy.

-What has surprised many in the delegation is chief minister’s enthusiasm and energy in attending the series of meeting with investors and industrialists, besides participating in the discussions braving minus nine degree Celsius temperature at this hilly village with a population of meagre two to three thousand.

*************