ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಖ್ಯಾತ ಸಮಾಜವಾದಿ ನಾಯಕ ದಿವಂಗತ ಶ್ರೀ ಗೋಪಾಲಗೌಡ ಅವರ ಪತ್ನಿ ಶ್ರೀಮತಿ ಸೋನಕ್ಕ ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

know_the_cm

ಬೆಂಗಳೂರು, ಅಕ್ಟೋಬರ್ 31, 2019

-ಖ್ಯಾತ ಸಮಾಜವಾದಿ ನಾಯಕ ದಿವಂಗತ ಶ್ರೀ ಗೋಪಾಲಗೌಡ ಅವರ ಪತ್ನಿ ಶ್ರೀಮತಿ ಸೋನಕ್ಕ ಅವರ ನಿಧನದಿಂದ ನನಗೆ ಅತೀವ ವೇದನೆಯಾಗಿದೆ.

-“ಸಮಾಜವಾದಿ ನಾಯಕರಾಗಿ ಮತ್ತು ಯಶಸ್ವಿ ತತ್ವಬದ್ಧ ರಾಜಕಾರಣಿಯಾಗಿ, ಪ್ರಖರ ವಾಗ್ಮಿಯಾಗಿ ಶ್ರೀ ಗೋಪಾಲಗೌಡರು ಸಾರ್ವಜನಿಕ ಜೀವನದಲ್ಲಿ ಯಶಸ್ಸನ್ನು ಹೊಂದಲು, ಶ್ರೀಮತಿ ಸೋನಕ್ಕ ಅವರು ಒತ್ತಾಸೆಯಾಗಿದ್ದರು.”

-“ಶ್ರೀಮತಿ ಸೋನಕ್ಕ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಮತ್ತು ಅವರ ನಿಧನದಿಂದಾದ ದು:ಖ ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ”, ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

---------------------

ಮುಖ್ಯಮಂತ್ರಿ ಅವರು ನಿಧರಾದ ದಿವಂಗತ ಸಮಾಜವಾದಿ ನಾಯಕ ಶ್ರೀ ಶಾಂತವೇರಿ ಗೋಪಾಲಗೌಡರ ಪತ್ನಿ ಶ್ರೀಮತಿ ಸೋನಕ್ಕ ಅವರ ಅಂತಿಮ ದರ್ಶನ ಪಡೆದರು.

know_the_cm

******************