ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಕದ್ರಿ ಗೋಪಾಲನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

know_the_cm

ಬೆಂಗಳೂರು, ಅಕ್ಟೋಬರ್ 11, 2019

-ಖ್ಯಾತ ಸ್ಯಾಕ್ಸಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

-ವಿದೇಶಿ ವಾದ್ಯವೊಂದನ್ನು ಶಾಸ್ತ್ರೀಯ ಸಂಗೀತಕ್ಕೆ ಹೊಂದಿಸಿಕೊಂಡು ಮಾಧುರ್ಯದ ಹೊನಲು ಹರಿಸಿದ ಶ್ರೇಷ್ಠ ಸಂಗೀತಗಾರ ಅವರು.

-ಅವರ ನಿಧನದಿಂದ ಸಂಗೀತ ಲೋಕದ ತಾರೆಯೊಂದು ಕಳಚಿದಂತಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

-ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬಕ್ಕೆ , ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

-----------

-Chief Minister B. S. Yediyurappa has condoled the death of renowned saxophone player Kadri Gopalanath.

-Kadri Gopalanath successfully adapted a foreign instrument like saxophone to our Indian classical music and amused connoisseurs with his enchanting performances. In his death the world of music has lost a great musician, CM said in his message.

-Chief Minister said, he would pray the almighty to rest his soul in peace and give strength to his bereaved family and fans to endure this loss.

******************