ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದ ಜನತೆಯ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ

know_the_cm

-ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ 26-07-2019ರಂದು ಅಧಿಕಾರ ಸ್ವೀಕರಿಸಿದರು.

-ರಾಜ್ಯಪಾಲ ಶ್ರೀ ವಜುಭಾಯಿ ವಾಲ ಅವರು ರಾಜಭವನದ ಗಾಜಿನ ಮನೆಯಲ್ಲಿ ನೂತನ ಮುಖ್ಯಮಂತ್ರಿಗಳಿಗೆ ಪ್ರಮಾಣ ವಚನ ಭೋದಿಸಿದರು.

-ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕನೆಯ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

know_the_cm

know_the_cm

-ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯ ಶ್ರೀ ಸಿದ್ದಲಿಂಗಪ್ಪ ಮತ್ತು ಶ್ರೀಮತಿ ಪುಟ್ಟತಾಯಮ್ಮ ಅವರ ಪುತ್ರರಾಗಿ ರೈತಾಪಿ ಕುಟುಂಬದಲ್ಲಿ ಯಡಿಯೂರಪ್ಪನವರು 1943ರ ಫೆಬ್ರವರಿ 27ರಂದು ಜನಿಸಿದರು.

-ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಯಡಿಯೂರಪ್ಪನವರು ಸ್ವಲ್ಪ ಕಾಲ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ತದನಂತರ ಶಿಕಾರಿಪುರದ ಖಾಸಗಿ ಅಕ್ಕಿ ಗಿರಣಿಯಲ್ಲಿ ಕೂಡ ಕಾರ್ಯನಿರ್ವಹಿಸಿದ್ದರು.

know_the_cm

-ಮೈತ್ರಾದೇವಿ ಅವರನ್ನು ಮದುವೆಯಾದ ಬಳಿಕ ಶಿಕಾರಿಪುರದಲ್ಲಿ ಸ್ವಂತ ಉದ್ದಿಮೆ ಕೂಡ ನಡೆಸಿದ್ದರು.

-ಬಾಲ್ಯದಿಂದಲೂ ನಾಯಕತ್ವದ ಗುಣ ಹಾಗೂ ಶಿಸ್ತುಬದ್ಧ ಜೀವನಕ್ಕೆ ಹೆಸರಾಗಿದ್ದ ಅವರು 1972ರಲ್ಲಿ ಶಿಕಾರಿಪುರ ಪುರಸಭೆಯ ಸದಸ್ಯ, ತದನಂತರ 1975 ರಲ್ಲಿ ಪುರಸಭೆ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣಕ್ಕೆ ಕಾಲಿರಿಸಿದರು.

know_the_cm

-1983ರಿಂದ ಈವರೆಗೆ ಆರು ಬಾರಿ ಶಿಕಾರಿಪುರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಅವರು ಶಾಸಕರಾಗಿ, ಲೋಕಸಭೆ ಸದಸ್ಯರಾಗಿ, ಕರ್ನಾಟಕ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿ, ಉಪಮುಖ್ಯಮಂತ್ರಿಯಾಗಿ ಮತ್ತು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

-2007ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದ ಅವರು ಅಲ್ಪ ಕಾಲದಲ್ಲಿ ಅಧಿಕಾರ ತ್ಯಜಿಸಬೇಕಾಯಿತು.

-2008ರಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಸುಮಾರು ಮೂರೂವರೆ ವರ್ಷ ಅಧಿಕಾರದಲ್ಲಿದ್ದರು.

-2018ರಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಲ್ಪ ಕಾಲದಲ್ಲಿ ಅಧಿಕಾರ ಬಿಟ್ಟುಕೊಟ್ಟರು.

-ಇದೀಗ ಅಂದರೆ 26-07-2019ರಂದು ನಾಲ್ಕನೇ ಬಾರಿಗೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

-ಜೀತದಾಳು ವಿಮುಕ್ತಿ ಹೋರಾಟ ಮತ್ತು ರೈತಪರ ಹೋರಾಟದ ಮೂಲಕ ರಾಜ್ಯ ರಾಜಕೀಯದ ಪ್ರಧಾನ ಭೂಮಿಕೆಯಲ್ಲಿ ಮೇಲೆದ್ದು ನಿಂತ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಹಲವು ಜನಪರ ಹಾಗೂ ಅಭಿವೃಧ್ಧಿ ಯೋಜನೆಗಳ ಅನುಷ್ಠಾನಕ್ಕೆ ಬುನಾದಿ ಹಾಕಿದ್ದರು.

know_the_cm

-ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷ, ಉಚಿತ ಬೈಸಿಕಲ್ ವಿತರಣೆ, ಕ್ಷೀರ ಸಹಾಯಧನ, ಆರೋಗ್ಯ ಕವಚ, ಸುವರ್ಣ ಭೂಮಿ, ಸುವರ್ಣ ಕಾಯಕ, ಸಾವಯವ ಕೃಷಿ ಮೊದಲಾದವು ಅವರ ಸರ್ಕಾರದ ಯಶಸ್ವಿ ಯೋಜನೆಗಳಾಗಿವೆ.

know_the_cm

know_the_cm

know_the_cm

-ಅಲ್ಲದೇ, ರಾಷ್ಟ್ರದ ಕೃಷಿ ಬಜೆಟ್ ಮಂಡನೆ ಮತ್ತು ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ವಿತರಣೆಯ ಖ್ಯಾತಿ ಕೂಡ ಅವರ ಸರ್ಕಾರಕ್ಕೆ ಇದೆ.

know_the_cm

know_the_cm

-ವಿವಿಧ ಗಣ್ಯರೊಂದಿಗೆ ಮುಖ್ಯಮಂತ್ರಿ................

know_the_cm

ದಿ|| ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ.....

************

know_the_cm

ದಿ|| ಮಾಜಿ ರಾಷ್ಟಪತಿ ಡಾ||ಎ.ಪಿ.ಜೆ ಅಬ್ದುಲ್ ಕಲಾಂ ಅವರೊಂದಿಗೆ.....

************

know_the_cm

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೊಂದಿಗೆ.....

************

know_the_cm

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ.....

************

know_the_cm

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ.....

************

know_the_cm

ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರೊಂದಿಗೆ.....

************************************************************