ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕಳೆದ ಮೂರು ದಿನಗಳಲ್ಲಿ ಕೇಂದ್ರದ ಇಬ್ಬರು ಮಾಜಿ ಸಚಿವರ ನಿಧನದಿಂದ ಶೋಕತಪ್ತವಾಗಿದೆ - ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

(ಬೆಂಗಳೂರು), ನವೆಂಬರ್ 26, 2018

-ರಾಜ್ಯ ಕಳೆದ ಮೂರು ದಿನಗಳಲ್ಲಿ ಕೇಂದ್ರದ ಇಬ್ಬರು ಮಾಜಿ ಸಚಿವರಾದ ಸಿ.ಕೆ ಜಾಫರ್ ಷರೀಫ್ ಹಾಗೂ ಅಂಬರೀಷ್ ಅವರ ನಿಧನದಿಂದ ಶೋಕತಪ್ತವಾಗಿದೆ.

-ಇಂಥ ದುಃಖದ ಸಂದರ್ಭದಲ್ಲಿ ಅಪಾರ ಅಭಿಮಾನಿಗಳು, ಅನುಯಾಯಿಗಳನ್ನು ಹೊಂದಿದ ಈ ಇಬ್ಬರೂ ನಾಯಕರ ಅಂತ್ಯಕ್ರಿಯೆ ಅತ್ಯಂತ ಶಾಂತಿಯುತವಾಗಿ ನೆರವೇರಿದ್ದು ನಮ್ಮ ಜನರ ಸಹನಶೀಲತೆಗೆ ಸಾಕ್ಷಿ. ಇದಕ್ಕಾಗಿ ಇಬ್ಬರೂ ನಾಯಕರ ಅನುಯಾಯಿಗಳು, ಅಭಿಮಾನಿಗಳಿಗೆ ನಾನು ಆಭಾರಿಯಾಗಿದ್ದೇನೆ.

ಮಾನ್ಯ ಮುಖ್ಯಮಂತ್ರಿ

-ಈ ಸಂದರ್ಭದಲ್ಲಿ ಹಗಳಿರುಳೆನ್ನದೆ ಶ್ರಮಿಸಿ ಅಗಲಿದ ನಾಯಕರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸಹಕರಿಸಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕ ಮಿತ್ರರು, ಚಿತ್ರರಂಗದ ಗಣ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು.

ಇದಕ್ಕಾಗಿ ಹಗಲಿರುಳು ಶ್ರಮಿಸಿದ ಅಧಿಕಾರಿ ವರ್ಗ, ಪೊಲೀಸರು ಹಾಗೂ ಅತ್ಯಂತ ಕಡಿಮೆ ಅವಧಿಯಲ್ಲಿ ಮಂಡ್ಯದ ಜನತೆಗೆ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕೆ ಅತ್ಯುತ್ತಮ ವ್ಯವಸ್ಥೆ ಮಾಡಿದ ಮಂಡ್ಯ ಜಿಲ್ಲಾಡಳಿತಗಳ ಕಾರ್ಯತತ್ಪರತೆ ಶ್ಲಾಘನೀಯ.

***********************************************