ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರೈತನ ಹೊಲಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು

ಮಾನ್ಯ ಮುಖ್ಯಮಂತ್ರಿ

ಬೀದರ್, ನವೆಂಬರ್ 15, 2018

-ಕೃಷಿಯಲ್ಲಿ ಹೆಚ್ಚು ಪ್ರಗತಿ ಸಾಧಿಸಲು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬೀದರ್ ಜಿಲ್ಲೆಯ ರೈತ ಕಾಶಿಲಿಂಗ ಅಗ್ರಹಾರ ಅವರ ಹೊಲಕ್ಕೆ ಭೇಟಿ ನೀಡಿದರು.

-ಕಾಶಿಲಿಂಗ ಅವರು ತಮ್ಮ ಸ್ವಂತ 6 ಎಕರೆ ಮತ್ತು ಇನ್ನುಳಿದ 4 ಎಕರೆ ಹೊಲದಲ್ಲಿ ಕೃಷಿಯಲ್ಲಿ ನಡೆಸಿದ ಹೊಸ ಪ್ರಯೋಗಗಳನ್ನು ಮುಖ್ಯಮಂತ್ರಿ ಅವರು ಖುದ್ದು ವೀಕ್ಷಿಸಿದರು‌. ತಮ್ಮ ಪಕ್ಕಕ್ಕೆ ರೈತ ಕಾಶಿಲಿಂಗ ಅವರನ್ನು ಕರೆದು ಹಲವಾರು ಮಾಹಿತಿ ಪಡೆದರು. ಇದೆ ವೇಳೆ ಕೃಷಿ ಹೊಂಡ, ಪಾಲಿಹೌಸ್ ವೀಕ್ಷಿಸಿದರು.

ಕಬ್ಬು ತಿಂದರು

ಮಾನ್ಯ ಮುಖ್ಯಮಂತ್ರಿ

-12 ತಿಂಗಳಿನ ಕಬ್ಬಿನ ಬೆಳೆ, ಅದರ ವಿಶೇಷತೆ ಕುರಿತು ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಮುಖ್ಯಮಂತ್ರಿ ಅವರಿಗೆ ವಿವರಿಸಿದರು. ಈ ವೇಳೆ ಸಚಿವರಾದ ಬಂಡೆಪ್ಪ ಅವರು ಕಬ್ಬಿನ ಗಳವೊಂದನ್ನು ಮುರಿದು ತಿಂದು ಗಮನ ಸೆಳೆದರು.‌ ಬಳಿಕ ಮುಖ್ಯಮಂತ್ರಿ ಅವರು ಕೂಡ ಕಬ್ಬು ತಿಂದರು.

ಸಸಿ ನೆಟ್ಟರು

ಮಾನ್ಯ ಮುಖ್ಯಮಂತ್ರಿ

-ಹೈದರಾಬಾದನ ವಿಶ್ವಾನಂದ ರಾಜ ಅವರು ಸಸಿ ನೆಡುವ‌ ಇಜಿ ಪ್ಲಾಂಟರ್ ಕೃಷಿ ಸಾಧನದ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದರು. ಬಳಿಕ ಮುಖ್ಯಮಂತ್ರಿ ಅವರು ಆ ಸಾಧನದ ಮೂಲಕ ಹೊಲದಲ್ಲಿ ಸಸಿ‌ ನೆಟ್ಟರು.

ತೋಟಗಾರಿಕಾ ಯೋಜನೆಯ ಮಾಹಿತಿ

-ಸಮಗ್ರ ತೋಟಗಾರಿಕಾ ಯೋಜನೆಯ ಅಳವಡಿಕೆಯನ್ನು ರೈತ ಕಾಶಿಲಿಂಗ ಅವರು ಅಳವಡಿಸಿಕೊಂಡ ಬಗ್ಗೆ ಮುಖ್ಯಮಂತ್ರಿ ಅವರಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಭಾವುಗೆ ವಿವರಿಸಿದರು.

-ಈ ಸಂದರ್ಭದಲ್ಲಿ ಸಚಿವರಾದ ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಅವರು ಇದ್ದರು.

***********************************************