ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಹಾಸನ ಜಿಲ್ಲೆಯ ಅಭಿವೃದ್ದಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ...

ಮಾನ್ಯ ಮುಖ್ಯಮಂತ್ರಿ

ಹಾಸನ, ನವೆಂಬರ್ 02, 2018

-ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯಲ್ಲಿ ಹೊಸ ಅಭಿವೃದ್ಧಿ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

-ಮಾಜಿ ಪ್ರಧಾನಿ ಹಾಲಿ ಲೋಕಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡ ,ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ ರೇವಣ್ಣ, ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್, ಜಿಲ್ಲೆಯ ಶಾಸಕರು ಹಾಗೂ ವಿವಿಧ ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳು ಉಪಸ್ಥಿತಿಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

-ಹೇಮಾವತಿ ಹಾಗೂ ಯಗಚಿ ಜಲಾಶಯಗಳ ಕೆಳಭಾಗ ಉದ್ಯಾನ ಅಭಿವೃದ್ಧಿಗೆ ಆಲಂಕಾರಿಕ ಕಾಮಗಾರಿಗಳ ಕುರಿತು ಸಭೆಯಲ್ಲಿ ಪ್ರಾತ್ಯಕ್ಷಿಕ ಏರ್ಪಡಿಸಲಾಗಿತ್ತು.

-ಈಗಿನ ಯೋಜಿತ ನೀಲ ನಕಾಶೆ ಪರಶೀಲಿಸಿ, ವಿವರ ಪಡೆದ ಮುಖ್ಯ ಮಂತ್ರಿಯವರು ಗೊರೂರು ಹಾಗೂ ಯಗಚಿಗಳಲ್ಲಿ ಜಲ ಸಾಹಸ ಮನರಜನೆಗಳು, ಕ್ರೀಡೆಗಳ ಜೊತೆಗೆ, ಜಿಲ್ಲೆಯ ಸಾಂಸ್ಕೃತಿಕ, ಐತಿಹಾಸಿಕ, ಪ್ರಕೃತಿಕ ಹಿನ್ನಲೆಯಲ್ಲಿ ದೇಶದಲ್ಲೇ ವಿನೂತನವಾದ ಉದ್ಯಾನವನಳನ್ನು ಸೃಷ್ಠಿ ಮಾಡಲು ಅಗತ್ಯ ಕ್ರಮವಹಿಸುವಂತೆ ಮುಖ್ಯಮಂತ್ರಿ ಅವರು ಸೂಚಿಸಿದರು.

-ಹಾಸನ ನಗರದ ಚನ್ನಪಟಣ್ಣ ಕೆರೆ ಶ್ರೀಘದಲ್ಲಿ ಕಾಮಗಾರಿ ಪ್ರಾರಂಭಕ್ಕೆ ಅಂಗಳದಲ್ಲಿ ವಿಹಾರಧಾಮದ ಅಭಿವೃದ್ದಿಗೆ ಈಗಾಗಲೇ ಬಜೆಟ್ಗನಲ್ಲಿ ಅನುದಾನ ಕಾಯ್ದಿಸಿದ್ದಾಗಿ ಅನುಮೋದನೆ ಒದಗಿಸುವುದು ಎಂದು ಮುಖ್ಯಮಂತ್ರಿ ಹೇಳಿದರು

-ಹೊಳೆನರಸೀಪುರ ನಗರದ ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಪಿ.ಎನ್.ಸಿ. ಸೇತುವೆ ಮುಖೇನ ಹೋಗುವ ರಸ್ತೆಯ ಅಭಿವೃದ್ದಿಗೆ ಸುಮಾರು 9 ವರ್ಷಗಳಿಂದ ರೈತರ ಜಮೀನುಗಳಿಗೆ ಭೂ ಪರಿಹಾರದ ಹಣದ ಆಕ್ಷೇಪಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಾಸನ ಜಿಲ್ಲೆಯಲ್ಲಿ ಬೇಲೂರು ಮತ್ತು ಹಳೇಬೀಡಿನಲ್ಲಿ ಖಾಲಿ ಇರುವ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕುರಿತು ಬೆಮಗಳೂರಿನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಯಿತು.

-ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ಹಾಸನ ನಗರದ ಹೆಚ್.ಡಿ ದೇವೇಗೌಡ ನಗರ ಮತ್ತು ಎಸ್.ಎಂ ಕೃಷ್ಣ ನಗರದ ಮಧ್ಯ ಭಾಗದಲ್ಲಿ ಖಾಲಿಯಿರುವ 7 ಎಕರೆ 20 ಗುಂಟೆ ಜಮೀನಿನಲ್ಲಿ ಮತ್ತು ಎಸ್.ಎಂ ಕೃಷ್ಣ ನಗರದಲ್ಲಿ ಖಾಲಿಯಿರುವ ಜಾಗದಲ್ಲಿ ನಿವೇಶನಗಳನ್ನು ವಿತರಿಸುವ ಬಗ್ಗೆ ಮತ್ತು ಮನೆಗಳನ್ನು ನಿರ್ಮಿಸುವ ಬಗ್ಗೆ ಹಾಗೂ ಕಾರ್ಮಿಕರಿಗೆ ಹಾಸನ ನಗರದ ಮೋಚಿ ಕಾಲೋನಿ, ಮೆಹಬೂಬ್ ನಗರ, ಚಿಕ್ಕನಾಳು, ಟಿಪ್ಪುನಗರ, ಸಿದ್ಧಯ್ಯ ನಗರ, ಶ್ರೀನಗರ, ವಿಶ್ವನಾಥ ನಗರ, ದೇವಿನಗರ, ರಂಗೋಲಿ ಹಳ್ಳ, ರಾಜಕುಮಾರ್ ನಗರ ಹಾಗೂ ಚಿಪ್ಪಿನಕಟ್ಟೆ ಬಡಾವಣೆಗಳಲ್ಲಿ ಬಡವರು ಹಲವಾರು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅವರಿಗೆ ನಿವೇಶನ ಮಂಜೂರು ಮಾಡುವ ಬಗ್ಗೆ ಹಾಗೂ ಹಾಸನ ನಗರದಲ್ಲಿ ಬಡವರಿಗೆ ನಿವೇಶನ ರಚಿಸಲು ಅವಶ್ಯಕ ಜಮೀನುಗಳನ್ನು ಖರೀದಿಸಲು ಕುರಿತು ಯೋಜನೆಗಳನ್ನು ವಿವರಿಸಿದರು.

-ವಸತಿಹೀನರಿಗೆ ಶೀಘ್ರ ನಿವೇಶನ ಒದಗಿಸಲು ಸಹಕಾರ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದರು. ಹಾಸನ ನಗರದ ಗಾಡೇನಹಳ್ಳಿ ಸಮೀಪ ಉದ್ದೇಶಿತ ಬಂಧಿಖಾನೆ ನಿರ್ಮಾಣದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

-ಮಾಜಿ ಪ್ರಧಾನಿ ದೇವೇಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ವೇಳೆ ದೂರದೃಷ್ಟಿ ಚಿಂತನೆಗಳನ್ನು ಇರಿಸಿಕೊಳ್ಳುವಂತೆ ಮತ್ತು ಹೊಸ ಉದ್ಯೋಗಗಳ ಸೃಷ್ಟಿಗೆ ಅವಕಾಶ ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

-ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್ ಅವರು ಪ್ರವಾಸೋದ್ಯಮ ಯೋಜನೆಗಳ ಕುರಿತು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ವ್ಯಕ್ತಪಡಿಸಿದರು.

-ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಆರ್. ಬಾಲಕೃಷ್ಣ, ಕೆ. ಲಿಂಗೇಶ್, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್. ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಜಯಶಂಕರ್, ರಾಜೀವ್ ಗಾಂಧಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಎ.ಎನ್. ಪ್ರಕಾಶ್ ಗೌಡ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

-------------------------------------

ಹಾಸನ ಜಿಲ್ಲೆಯಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಅಭಿವೃದ್ದಿ ಯೋಜನೆ: ಮುಖ್ಯಮಂತ್ರಿ ಘೋಷಣೆ

ಮಾನ್ಯ ಮುಖ್ಯಮಂತ್ರಿ

ಹಾಸನ, ನವೆಂಬರ್ 02, 2018

-ಹಾಸನ ಜಿಲ್ಲೆಯಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಅಭಿವೃದ್ದಿಗೆ ನೀಲ ನಕಾಶೆ ಸಿದ್ದವಾಗುತ್ತಿದ್ದು ಶೀಘ್ರದಲ್ಲೇ ಅದಕ್ಕೊಂದು ರೂಪ ಹಾಗೂ ಚಾಲನೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

-ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹಾಸನ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಸಚಿವರು, ಶಾಸಕರು ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಈ ಮಾಹಿತಿ ನೀಡಿದರು.

-ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಹೇಮಾವತಿ, ಯಗಚಿ ಬೇಲೂರು ಹಳೇ ಬೀಡುಗಳನ್ನು ಕೇಂದ್ರ ವನ್ನಾಗಿರಿಸಿಕೊಂಡು ರೂ. 150000 ಕೋಟಿಗೂ ಅಧಿಕ ಮೊತ್ತದ ಪ್ರವಾಸಿ ಆಕರ್ಷಣೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು ಜೈಪುರ ಮೂಲಕ ಇಂಟೆಕ್ ವಾಸ್ತು ವಿನ್ಯಾಸ ಸಂಸ್ಥೆ ಪ್ರಾರಂಭಿಕ ಹಂತದ ನೀಲ ನಕಾಶೆ ಸಿದ್ದಪಡಿಸಿ ನೀಡಿದೆ. ಪ್ರಾರ್ಥಮಿಕ ಹಂತದ ಪರಿಶೀಲನೆ ಹಾಗೂ ಚರ್ಚೆಗಳು ನಡೆದಿದ್ದು ಬೆಂಗಳೂರಿನಲ್ಲಿ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

-ಬೇಲೂರು ಹಾಗೂ ಯಗಚಿ ಅಣೆಕಟೆಗಳ ಮುಂಭಾಗ ಬೃದಾವನಕ್ಕಿಂತಲೂ ಆಕರ್ಷೇಣಿವಾದ ಉದ್ಯಾನವನ, ಥೀಂ ಪಾರ್ಕ್, ಜಲಸಾಹಸ ಮನರಂಜನೆಗಳು, ಕ್ರೀಡೆಗಳು, ರಾತ್ರಿ ಸಫಾರಿ, ವಾಸ್ತು ವಿನ್ಯಾಸ ಸೌಂದರ್ಯಭಿವೃದ್ದಿಗೆ ಯೋಜಿಸಲಾಗಿದೆ. ಚನ್ನಪಟ್ಟಣ ಕೆರೆ ಆವರಣದಲ್ಲಿ ವಿಶೇಷ ಅಭಿವೃದ್ದಿ ಚಟುಚಟಿಕೆಗಳು ನಡೆಯಲಿವೆ. ಜಿಲ್ಲೆಯಲ್ಲಿ ಎಲ್ಲಾ ಪ್ರವಾಸೋದ್ಯಮ ಅಭಿವೃದ್ದಿಗೆ ಸಾವಿರಾರು ಕೋಟಿ ವೆಚ್ಚವಾಗಲಿದ್ದು ಚೀನಾ, ಜಪಾನ್ ಮತ್ತಿತರ ದೇಶಗಳಿಂದ ಹೂಡಿಕೆದಾರರು ಬಂಡವಾಳ ತೊಡಗಿಸಲು ಮುಂದಾಗಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ದಿಗೂ ಇದರಿಂದ ಅನುಕೂಲವಾಹಲಿದೆ ಎಂದು ಕುಮಾರಸ್ವಮಿ ಮಾಹಿತಿ ನೀಡಿದರು.

-ಈಗಾಗಲೇ ಅಭಿವೃದ್ದಿ ಬಜೆಟ್ನಲ್ಲಿ 50 ಕೋಟಿ ಮೀಸಲಿರಿಸಲಾಗಿದ್ದು ಹಂತದ ಯೋಜನೆಗೆ ರೂ. 126 ಕೋಟಿ ಅನುದಾನ ಒದಗಿಸಲಾಗುವುದು ಮುಂಬರುವ ಕ್ಯಾಬಿನೆಟ್ನಲ್ಲಿ ಈ ವಿಷಯ ಚರ್ಚಿಸಿ ಅನುಮೋದನೆ ದೊರೆಕಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.

-ಈ ವರ್ಷ ಬಾರಿ ಮಳೆಯಿಂದ ಜಿಲ್ಲೆಯಲ್ಲಿಯೂ ನೂರಾರು ಶಾಲಾ, ಕಾಲೇಜು ಕಟ್ಟಡಗಳು ಹಾನಿಗೀಡಾಗಿವೆ. ಅವುಗಳ ದುರಸ್ಥಿಗೆ 15 ಕೋಟಿ ರೂ ಅನುದಾನ ಒದಗಿಸಲಾಗುವುದು. ಬೇಲೂರಿ ತಾಲ್ಲೂಕಿನಲ್ಲಿಯೂ ಸಾಕಷ್ಟು ಹಾನಿ ಸಂಭವಿಸಿದ್ದು ಅದನ್ನು ಅತಿವೃಷ್ಟಿ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಬಗ್ಗೆ ಗಮನ ಹರಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

-ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಸತಿ ಹೀನ ಬಡವರನ್ನು ಗುರುತಿಸಿ ಸೂಕ್ತ ನಿವೇಶನ ಮತ್ತು ಸೌಕರ್ಯ ಒದಗಿಸಲು ಸೂಚನೆ ನೀಡಲಾಗಿದೆ ಎಂದ ಮುಖ್ಯಮಂತ್ರಿ ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ರಾಷ್ಟ್ರೀಕೃತ ಬ್ಯಾಂಕ್ಗಳ ರೈತರ ಸಾಲಮನ್ನಾಕ್ಕೆ ಬಜೆಟ್ನಲ್ಲಿಯೂ ಅನುದಾನ ಘೊಷಿಸಿದೆ. ಸಹಾಕಾರ ಬ್ಯಾಂಕ್ಗಳ ಸಾಲಮನ್ನಾ ಕಂತುಗಳು ಬಿಡುಗಡೆಯಾಗಿದೆ ರಾಷ್ಟ್ರೀಕೃತ ಬ್ಯಾಂಕ್ಗಳು ಈಗ ಸಹಕಾರ ನೀಡುವ ಸೂಚನೆ ನೀಡಿವೆ ಇದೇ ತಿಂಗಳು 10ಲಕ್ಷ ಜನರಿಗೆ ಖುಣ ಮುಕ್ತ ಪತ್ರ ವಿತರಿಸಲಾಗುವುದು ಎಂದು ಅವರು ಹೇಳಿದರು.

-ಯಾವುದೇ ರೈತರು ಕೃಷಿಗಾಗಿ ಸಾಲದ ಹೊರೆ ಹೊರುವಂತಾಗಬಾರದು, ಆತ್ಮಹತ್ಯೆ ಮಾಡಿಕೊಳ್ಳುವಂತಾಗಬಾರದು ಅದಕ್ಕೆ ಕೃಷಿ ಯೋಜನೆಗಳ ಮಾರ್ಪಡಿಗೆ ಚಿಂತನೆ ನಡೆಸಲಾಗಿದೆ ಪ್ರತಿಯೊಬ್ಬ ನಾಗರೀಕರೂ ನೆಮ್ಮದಿಯಿಂದ ಗೌರವಯುತ ಜೀವನ ನಡೆಸುವಂತಾಗಬೇಕು ಅದಕ್ಕಾಗಿ ತಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

-ಹಾಸನಾಂಬೆ ದರ್ಶನ ಪಡೆದು ಪ್ರಾರ್ಥನೆ ಸಮರ್ಪಿಸಿದ್ದೇನೆ ಜಿಲ್ಲಾ ಅಭಿವೃದ್ದಿಗೆ ಶಾಶ್ವತ ಬೃಹತ್ ಯೋಜನೆ ನೀಡಬೇಕೆಂಬುದು ತಮ್ಮ ಹಂಬಲ ಮಾಜಿ ಪ್ರಧಾನಿ ದೇವೇಗೌಡರ ಒತ್ತಾಸೆಯಾಗಿದೆ ಅದನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

-ರೈತರ ಭೂದಾಖಲೆಗಳನ್ನು ಸರಿಪಡಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಕಲಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ತಿಳಿದರು.

-ಜಿಲ್ಲಾ ಉಸ್ತುವಾರಿ ಸಚಿವರಾಸ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ಜಿಲ್ಲೆಯ ರಸ್ತೆ, ಮೂಲಭೂತ ಸೌಕರ್ಯ ಹಾಗೂ ಶಿಕ್ಷಣಿಕ ಯೋಜನೆಗಳಿಗೆ ಹೆಚ್ಚು ಅನುದಾನ ಒದಗಿಸಲಾಗಿದೆ. ದಶಕದಿಂದ ನೆನೆಗುದಿಗೆ ಬಿದಿದ್ದ ಅಭಿವೃದ್ದಿ ಚಟುವಟಿಕೆಗಳಿಗೆ ಚುರುಕು ನೀಡಲಾಗಿದೆ ಎಂದರು.

-ಸಚಿವರಾದ ಸಾ.ರಾ. ಮಹೇಶ್, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಆರ್. ಬಾಲಕೃಷ್ಣ, ಕೆ. ಲಿಂಗೇಶ್, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್. ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಜಯಶಂಕರ್, ರಾಜೀವ್ ಗಾಂಧಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಎ.ಎನ್. ಪ್ರಕಾಶ್ ಗೌಡ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

***********************************************