ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ನೊಂದ ಮಹಿಳೆಗೆ ಮುಖ್ಯಮಂತ್ರಿ ನೆರವು...

ಮಾನ್ಯ ಮುಖ್ಯಮಂತ್ರಿ

ಗೃಹ ಕಚೇರಿ ಕೃಷ್ಣಾ (ಬೆಂಗಳೂರು), ಅಕ್ಟೋಬರ್ 01

-ಪತಿ ಕಳೆದುಕೊಂಡು ನಿರಾಶ್ರಿತಳಾದ ಮಹಿಳೆಗೆ ಮುಖ್ಯಮಂತ್ರಿಯವರು ನೆರವು ನೀಡಿ ಸ್ಥೈರ್ಯ ತುಂಬಿದ ಮಾನವೀಯ ಘಟನೆಗೆ ಗೃಹ ಕಚೇರಿ ಕೃಷ್ಣಾ ಸಾಕ್ಷಿಯಾಯಿತು.

-ಕೊಲೆಯಾದ ಗಂಡನ ಆಸರೆ ಕಳೆದುಕೊಂಡು ಎರಡು ಮಕ್ಕಳ ಹೊಣೆ ನಿಭಾಯಿಸುವುದು ಹೇಗೆಂದು ದಿಕ್ಕು ತೋಚದಂತಾಗಿದ್ದ, ಚನ್ನಪಟ್ಟಣ ತಾಲ್ಲೂಕಿನ ಗೃಹಿಣಿ ಶಿಲ್ಪಶ್ರೀಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೆರವಿನ ಹಸ್ತ ಚಾಚಿದ್ದಾರೆ.

-ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಶಿಲ್ಪಶ್ರೀಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು ಎರಡು ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಲ್ಲದೆ, ಕೂಡಲೇ ರಾಮನಗರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಮಕ್ಕಳಿಗೆ ಸರ್ಕಾರದ ವಸತಿ ಶಾಲೆಯಲ್ಲಿ ಪ್ರವೇಶ ದೊರಕಿಸುವಂತೆ ಸೂಚಿಸಿದರು.

-ಕಾರು ಚಾಲಕರಾಗಿದ್ದ ಪತಿ ನಾಗರಾಜು ಅವರು ಆಗಸ್ಟ್ 27 ರಂದು ಶಿವಮೊಗ್ಗಕ್ಕೆ ಬಾಡಿಗೆಗೆಂದು ಹೋದವರು ನಾಪತ್ತೆಯಾಗಿದ್ದರು. ಪತಿ ಕಾಣೆಯಾಗಿರುವ ಬಗ್ಗೆ ಶಿಲ್ಪಶ್ರೀ ದೂರು ನೀಡಿದ್ದರು. ಸೆಪ್ಟೆಂಬರ್ 6 ರಂದು ಅವರು ಕೊಲೆಯಾಗಿರುವುದು ತಿಳಿದುಬಂದಿತ್ತು.

----------------

ಮಾನ್ಯ ಮುಖ್ಯಮಂತ್ರಿ

ಗೃಹ ಕಚೇರಿ ಕೃಷ್ಣಾ (ಬೆಂಗಳೂರು), ಅಕ್ಟೋಬರ್ 01

-ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಕ ರೋಹಿತ್ ಗೆ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ. ಚೆಕ್ ಅನ್ನು ಮುಖ್ಯಮಂತ್ರಿಗಳು ಹಸ್ತಾಂತರಿಸಿದರು.