ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮುಖ್ಯಮಂತ್ರಿಗಳನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

know_the_cm

ಗೃಹ ಕಚೇರಿ ಕೃಷ್ಣಾ (ಬೆಂಗಳೂರು), ಸೆಪ್ಟೆಂಬರ್ 25

-ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ರಾಜ್ಯಪಾಲರಾದ ಲಿಂಡಾ ಡೆಸ್ಸೌ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿತು.

-ಕರ್ನಾಟಕ ಮತ್ತು ವಿಕ್ಟೋರಿಯಾದ ನಡುವೆ ತಂತ್ರಜ್ಞಾನ, ಶಿಕ್ಷಣ ಮತ್ತು ಸಂಶೋಧನೆ, ಆರೋಗ್ಯ, ಮೂಲಭೂತ ಸೌಕರ್ಯ, ತ್ಯಾಜ್ಯ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಉತ್ಸುಕವಾಗಿದೆ. ಆಸ್ಟ್ರೇ ಲಿಯಾದಲ್ಲಿ ಕರ್ನಾಟಕ ಮೂಲದ ಟೆರ್ರಾ ಬ್ಲೂ ಸ್ಟಾರ್ಟ್ಅಪ್ ಕಂಪನಿ ಸೇರಿದಂತೆ ಇನ್ಫೋಸಿಸ್ ನಂತಹ ದೈತ್ಯ ಕಂಪನಿಯೂ ಕಾರ್ಯನಿರ್ವಹಿಸುತ್ತಿವೆ ಎಂದು ವಿಕ್ಟೋರಿಯಾದ ರಾಜ್ಯಪಾಲರಾದ ಲಿಂಡಾ ಡೆಸ್ಸೌ ತಿಳಿಸಿದರು.

-ಮುಖ್ಯಮಂತ್ರಿಗಳು ಮಾತನಾಡಿ, ವಿಕ್ಟೋರಿಯಾ ಹಾಗೂ ಕರ್ನಾಟಕದ ಸಹಯೋಗದಲ್ಲಿ ಏರೋಸ್ಪೇಸ್ ತಂತ್ರಜ್ಞಾನ, ಕೃಷಿಯಲ್ಲಿ ನೂತನ ವಿಧಾನಗಳು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಒಟ್ಟಾಗಿ ಕಾರ್ಯನಿರ್ವಹಿಸಬಹುದಾದ ಕ್ಷೇತ್ರಗಳನ್ನು ಗುರುತಿಸಲಾಗುವುದು ಎಂದರು. ಮುಂಬರಲಿರುವ ಬೆಂಗಳೂರು ಟೆಕ್ ಸಮ್ಮಿಟ್- 2018 ರಲ್ಲಿ ವಿಕ್ಟೋರಿಯಾದ ಕಂಪನಿಗಳು ಭಾಗವಹಿಸಲು ಅವರು ಆಹ್ವಾನವಿತ್ತರು.

-ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಮತ್ತು ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.