ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಸಮಸ್ತ ಜನತೆಯ ಗಮನಕ್ಕೆ

know_the_cm

(ಬೆಂಗಳೂರು), ಜುಲೈ 12, 2020

ಸಮಸ್ತ ಜನತೆಯ ಗಮನಕ್ಕೆ.....

-ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ.

-ಈ ಹಿನ್ನೆಲೆಯಲ್ಲಿ, ತಜ್ಞರ ಸಲಹೆಯಂತೆ ಜಲೈ 14, 2020ರ ಮಂಗಳವಾರ ರಾತ್ರಿ 8.00 ಗಂಟೆಯಿಂದ ಜುಲೈ 22, 2020ರ ಬೆಳಿಗ್ಗೆ 5.00 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

-ಈ ಅವಧಿಯಲ್ಲಿ, ಆಸ್ಪತ್ರೆ, ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಮುಂತಾದ ಅತ್ಯಗತ್ಯ ಸೇವೆಗಳು ಸಿಗಲಿವೆ. ಹಾಗೆಯೇ, ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ.

-ದಿನಬಳಕೆಯ ವಸ್ತುಗಳ ಖರೀದಿ ಮತ್ತು ಇತರ ಅತ್ಯಗತ್ಯ ಸಂದರ್ಭಗಳಲ್ಲಿ ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಸರ್ಕಾರ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ. ಲಾಕ್ಡೌನ್ ವೇಳೆಯಲ್ಲಿ ಮನೆಯಲ್ಲೇ ಇರುವ ಮೂಲಕ ಸೋಂಕು ನಿಯಂತ್ರಣಕ್ಕೆ ಕೈ ಜೋಡಿಸಲು ಎಲ್ಲರೂ ಸಹಕರಿಸಲು ಕೋರಿಕೆ.

-ಹಾಗೆಯೇ, ಕೋವಿಡ್19 ಸೋಂಕು ಹರಡುವುದನ್ನು ನಿಯಂತ್ರಿಸಲು ಹಗಲಿರುಳೂ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಮತ್ತು ಪೋಲಿಸ್ ಸಿಬ್ಬಂದಿ ಹಾಗೂ ಎಲ್ಲಾ ಅಧಿಕಾರಿಗಳು, ಸ್ವಯಂ ಸೇವಕರು, ಮನೆ ಮನೆಗೂ ಕೋವಿಡ್19 ಕುರಿತು ಮಾಹಿತಿ ನೀಡುತ್ತಿರುವ ಪತ್ರಕರ್ತರು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು.

-ಕೋವಿಡ್19 ಸೋಂಕು ಹರಡುವುದನ್ನು ನಿಯಂತ್ರಿಸಲು ನಿಮ್ಮೆಲ್ಲರ ಸಹಕಾರ ಮತ್ತು ಸಹಯೋಗ ಅತಿ ಅಗತ್ಯ.

ಬಿ ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ

-------------

Dear citizens....

-In view of sudden surge of COVID 19 cases in Bengaluru and on the advice of the experts, it is decided to impose lockdown for a period of one week in Bengaluru Urban and Rural Districts starting from 8 PM on Tuesday, 14th of July 2020 to 5 AM 22 July 2020. Detailed guidelines will be issued on Monday in this regard.

-During lockdown period, supply of essential commodities like groceries, vegetables, fruits, milk, medicines will continue uninterrupted. MBBS, post graduate examinations will be conducted as scheduled.

-I appreciate the tireless efforts of our healthcare and police personnel, ASHA workers, volunteers and media persons in containing COVID 19 pandemic in the state.

-I appeal people to cooperate with the Government, wear masks, maintain social distance, follow all guidelines, take all precautionary steps and help us contain the pandemic.

B S Yediyurappa

Chief Minister, Government of Karnataka

*************