ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮೆಟ್ರೋ ಕೋಚ್ ನಿರ್ಮಾಣ ಕಾರ್ಯವನ್ನು ಬಿ.ಇ.ಎಂ.ಎಲ್ ಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಗೃಹ ಕಚೇರಿ ಕೃಷ್ಣಾ (ಬೆಂಗಳೂರು), ಮೇ 08, 2019

-ಬೆಂಗಳೂರು ಎರಡನೇ ಹಂತದ ಮೆಟ್ರೋ ಯೋಜನೆಯ ಕೋಚ್ ನಿರ್ಮಾಣ ಕಾರ್ಯವನ್ನು ಬಿ.ಇ.ಎಂ.ಎಲ್ ಸಂಸ್ಥೆಗೆ ವಹಿಸಬೇಕೆಂದು ಬಿ.ಇ.ಎಂ.ಎಲ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದೀಪಕ್ ಕುಮಾರ್ ಹೂಟ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

-ಮಹಾರಾಷ್ಟ್ರ ಮೆಟ್ರೋ ರೈಲು ಕಾರ್ಪೋರೇಷನ್ ನಲ್ಲಿ ಶೇ 70 ರಷ್ಟು ಕೋಚ್ಗಳನ್ನು ನಿರ್ಮಿಸಲು ಬಿ.ಇ.ಎಂ.ಎಲ್ಗೆ ವಹಿಸಿದೆ. ಬಿ.ಇ.ಎಂ.ಎಲ್ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕೋಚ್ ನಿರ್ಮಾಣ ಕಾರ್ಯವನ್ನು ವಹಿಸಿದಲ್ಲಿ ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತದೆ. ಈ ನಿಟ್ಟಿನಲ್ಲಿ ಕೋಚ್ ನಿರ್ಮಾಣ ಕಾರ್ಯವನ್ನು ಬಿ.ಇ.ಎಂ.ಎಲ್ಗೆ ವಹಿಸುವಂತೆ ಅವರು ಮನವಿ ಮಾಡಿದರು.

-ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿ.ಎಂ.ಆರ್.ಸಿ.ಎಲ್ ಅಧ್ಯಕ್ಷರಾದ ಅಜಯ್ ಸೇಠ್ ಅವರಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

*********************************