ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಶಿವಳ್ಳಿ ಕುಟುಂಬದ ಸಹೋದರನಾಗಿ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ - ಮುಖ್ಯಮಂತ್ರಿ

(ಯರಗುಪ್ಪಿ), ಮಾರ್ಚ್ 23, 2019

-ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ಬಡವರ ಬಗೆಗಿನ ಅವರ ಕಾಳಜಿ ನಿಜವಾದ ಜನನಾಯಕನೊಬ್ಬ ಅಳವಡಿಸಿಕೊಳ್ಳಲು ಮಾದರಿಯಾಗಿತ್ತು.

-ಅವರ ಕುಟುಂಬದ ಸಹೋದರನಾಗಿ ಸಂಕಷ್ಟಗಳ ನಿವಾರಣೆಗೆ ಶ್ರಮಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

-ಯರಗುಪ್ಪಿಯಲ್ಲಿ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, ಗುರುವಾರ ತಾವು ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಪೂರ್ಣವಾಗಿ ಅವರು ನನ್ನೊಂದಿಗೆ ಇದ್ದರು.

-ಕಟ್ಟಡ ಕುಸಿತದ ಸಂತ್ರಸ್ತರ ಬಗ್ಗೆ ಮಮ್ಮಲ ಮರುಗಿದ್ದರು.ಕಿಮ್ಸ್ ಭೇಟಿಯ ಸಂದರ್ಭದಲ್ಲಿ ಆ ಸಂಸ್ಥೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಕನಸು ವ್ಯಕ್ತಪಡಿಸಿದ್ದರು.

-ಶಿವಳ್ಳಿ ಅವರೊಂದಿಗೆ ಕಳೆದ ಆರೇಳು ತಿಂಗಳುಗಳಿಂದ ಬಹಳ ಆತ್ಮೀಯತೆ ಬೆಳೆದಿತ್ತು.

-ಇಲ್ಲಿ ನೆರೆದ ಜನಸ್ತೋಮ ನೋಡಿ, ಅವರ ಬಗೆಗಿನ ಗೌರವ ಇಮ್ಮಡಿಯಾಗಿದೆ. ಸದಾಕಾಲ ಜನರ ಸೇವೆಗೆ ಒತ್ತು ನೀಡಿದ್ದ ಸಿ.ಎಸ್. ಶಿವಳ್ಳಿ ಅವರ ಕುಟುಂಬದ ಸಂಕಷ್ಟಗಳಲ್ಲಿ ಭಾಗಿಯಾಗೋಣ ಎಂದರು.

*********************************