ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಜನ ಸೇವಕರಾದ ಮುಖ್ಯಮಂತ್ರಿ...

ದಾಸರಹಳ್ಳಿ(ಬೆಂಗಳೂರು), ಮಾರ್ಚ್ 02, 2019

-ರಾಜ್ಯ ಸರ್ಕಾರ ವಿನೂತನ ಯೋಜನೆಯಾದ “ಜನ ಸೇವಕ - ನಾಗರಿಕರ ಮನೆಬಾಗಿಲಿಗೆ ಸರ್ಕಾರದ ಸೇವೆಗಳು” ಯೋಜನೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದಾಸರಹಳ್ಳಿಯಲ್ಲಿ ಮನೆ ಮನೆ ತೆರಳಿ ಚಾಲನೆ ನೀಡಿದರು.

-ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಯೋಜನೆಯನ್ನು ಮುಖ್ಯಮಂತ್ರಿಗಳು ಸ್ಥಳೀಯರೊಬ್ಬರ ಮೋಟಾರ ಸೈಕಲ್ ಮೇಲೆ ಕುಳಿತು ಹಲವಾರು ಮನೆಗಳಿಗೆ ತೆರಳಿ ಯೋಜನೆಯ ಲಾಭ ಪಡೆಯುವಂತೆ ಕೋರಿದರು. ನಾಗರಿಕರೊಂದಿಗೆ ಮಾತನಾಡಿ ಅವರು, “ಈ ಯೋಜನೆಯಡಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬಿ.ಬಿ.ಎಂ.ಪಿ ಖಾತಾ ಸೇವೆಗಳು, ಹಿರಿಯ ನಾಗರಿಕರ ಕಾರ್ಡ್ ಮತ್ತು ಆರೋಗ್ಯ ಕಾರ್ಡ್ ಮುಂತಾದ ಸೇವೆಗಳನ್ನು ಪಡೆಯಬಹುದಾಗಿದ್ದು, ಸಹಾಯವಾಣಿ ಸಂಖ್ಯೆ: 080-44554455 ದೂರವಾಣೆ ಕರೆ ಮಾಡಿದರೆ ಸಾಕು ನಾಗರಿಕರು ಕೋರಿದ ಸೇವೆಗಳನ್ನು ಸಮಯ ಬದ್ಧವಾಗಿ ಹಾಗೂ ಗುಣಾತ್ಮಕವಾಗಿ ವಿಲೇವಾರಿ ಮಾಡಲಾಗುವುದು” ಎಂದು ಮಾಹಿತಿಯನ್ನೂ ನೀಡಿದರು.

-ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಬಿಬಿಎಂಪಿ ಅನುದಾನದಡಿಯಲ್ಲಿ ಫಲಾನುಭಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಆರ್ ಮಂಜುನಾಥ್, ಬಿಬಿಎಂಪಿ ಮಹಾಪೌರರಾದ ಶ್ರೀಮತಿ ಗಂಗಾಬಿಕೆ ಮಲ್ಲಿಕಾರ್ಜುನ, ಬಿಬಿಎಂಪಿ ಆಯುಕ್ತರು ಮಂಜುನಾಥ್ ಪ್ರಸಾದ್ ಅವರುಗಳು ಉಪಸ್ಥಿತರಿದ್ದರು.

*********************************