ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

2.9 ಲಕ್ಷ ಸಾಲ ಖಾತೆಗಳಿಗೆ 1440 ಕೋಟಿ ರೂ. ಬಿಡುಗಡೆ

(ಬೆಂಗಳೂರು), ಜನವರಿ 28, 2019

ರೈತರ ಬೆಳೆಸಾಲ ಮನ್ನಾ ಯೋಜನೆಯಡಿ ಜನವರಿ 28 ರವರೆಗೆ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಒಟ್ಟು 2.9 ಲಕ್ಷ ಸಾಲ ಖಾತೆಗಳಿಗೆ 1440 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಜನವರಿ 28ರ ವರೆಗೆ ಸಹಕಾರಿ ಬ್ಯಾಂಕುಗಳ 1.4 ಲಕ್ಷ ಸಾಲಖಾತೆಗಳಿಗೆ 768 ಕೋಟಿ ರೂ. ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ 150125 ಸಾಲಖಾತೆಗಳಿಗೆ 672.5 ಕೋಟಿ ರೂ. ಬೆಳೆಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲಾಗಿದೆ.

*********************************