ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮೃತ ಪ್ರಶಿಕ್ಷಣಾರ್ಥಿ ಪಿಎಸ್‍ಐಗೆ ನೆರವು ನೀಡಿದ ಸಹೋದ್ಯೋಗಿಗಳು: ಮುಖ್ಯಮಂತ್ರಿ ಅಭಿನಂದನೆ

ಮಾನ್ಯ ಮುಖ್ಯಮಂತ್ರಿ

(ಬೆಂಗಳೂರು), ಜನವರಿ 07, 2019

-ಕಲಬರಗಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿ ಬಸವರಾಜ ಶಂಕರಪ್ಪ ಮಂಚನೂರು ಅವರ ಆಕಸ್ಮಿಕ ನಿಧನ ಅತ್ಯಂತ ನೋವಿನ ಸಂಗತಿ.ಆದರೆ ಅವರ 590 ಸಹ ಪ್ರಶಿಕ್ಷಣಾರ್ಥಿಗಳು ತಲಾ 10 ಸಾವಿರ ರೂ. ಗಳಂತೆ ಮೃತರ ಕುಟುಂಬಕ್ಕೆ ನೆರವು ನೀಡಲು ಮುಂದಾಗಿರುವುದು ಅಭಿನಂದನೀಯ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

-ಕಲಬುರಗಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು ಬಸವರಾಜ ಮಂಚನೂರು ಅವರು ಆಕಸ್ಮಿಕ ನಿಧನರಾದ ಹಿನ್ನೆಲೆಯಲ್ಲಿ ತಮ್ಮ ಗೆಳೆಯನಿಗೆ ನೆರವಾಗಲು ಮುಂದೆ ಬಂದಿರುವ ವಿಷಯ ತಿಳಿದು ಹೃದಯ ತುಂಬಿ ಬಂತು. ಅವರ ಔದಾರ್ಯ ಇತರರಿಗೆ ಮಾದರಿಯಾದುದು.

-ಇದಕ್ಕೆ ಪ್ರೇರಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಹಾಗೂ ತಮ್ಮ ಗೆಳೆಯ ಸಾವಿಗೆ ಮನಮಿಡಿದು ಸ್ಪಂದಿಸಿದ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಮುಖ್ಯಮಂತ್ರಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

-ರಾಜ್ಯ ಸರ್ಕಾರವು ನಿಯಮಾನುಸಾರ ಬಸವರಾಜ ಅವರಿಗೆ ನೀಡಬೇಕಾದ ಪರಿಹಾರಗಳನ್ನು ತ್ವರಿತವಾಗಿ ನೀಡುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*********************************