ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಭತ್ತದ ಕೊಯ್ಲಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ

ಮಾನ್ಯ ಮುಖ್ಯಮಂತ್ರಿ

ಪಾಂಡವಪುರ (ಮಂಡ್ಯ), ಡಿಸೆಂಬರ್ 07, 2018

-ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದ ಹೊರಹೊಲಯದಲ್ಲಿರುವ ಗದ್ದೆಯಲ್ಲಿ ಬೆಳೆದು ನಿಂತಿರುವ ಭತ್ತದ ಬೆಳೆಯನ್ನು ಕಟಾವು ಮಾಡುವ ಮೂಲಕ ಚಾಲನೆ ನೀಡಿದರು.

-ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ರೈತರ ಜೊತೆಗೂಡಿ ಭತ್ತದ ಕೊಯ್ಲು ಮಾಡಲು ಮುಂದಾಗಿರುವ ನಿರ್ಧಾರದಿಂದ ಈ ಭಾಗದ ರೈತರಲ್ಲಿ ಮತ್ತಷ್ಟು ಉತ್ಸಾಹ ಮೂಡಿದ್ದು, ಕೊಡಗಿನಲ್ಲಿ ಉತ್ತಮ ಮಳೆಯಿಂದ ನಾಡಿನ ರೈತರು ಕೃಷಿಯಲ್ಲಿ ಭತ್ತ ಬೆಳೆಯಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

-ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು, ರೈತರ ಸಾಲಮನ್ನಾವನ್ನು ಹಂತ ಹಂತವಾಗಿ ಮಾಡಲಾಗುತ್ತ್ತದೆ.ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಮೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಮಾನ್ಯ ಮುಖ್ಯಮಂತ್ರಿ

- ದೊಡ್ಡಬಳ್ಳಾಪುರ ಹಾಗೂ ಸೇಡಂನಲ್ಲಿ ಸಾಲಮನ್ನಾ ಕಾರ್ಯಕ್ರಮಕ್ಕೆ ಡಿಸೆಂಬರ್ 8 ರಂದು ಚಾಲನೆ ನೀಡಲಾಗುತ್ತಿದ್ದು ಮೊದಲ ಹಂತವಾಗಿ ರಾಜ್ಯದಲ್ಲಿ 9,480 ಕೋಟಿ ರೈತರ ಸಾಲಮನ್ನಾ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ 535 ಕೋಟಿ ರೈತರ ಸಾಲಮನ್ನಾ ಮಾಡಲಾಗುತ್ತಿದ್ದು, ಮುಂದೆ ಹಂತ ಹಂತವಾಗಿ 45 ಸಾವಿರ ಕೋಟಿ ಸಾಲಮನ್ನಾ ಮಾಡುಲಾಗುವುದು. ಇದರಿಂದ ರೈತರು ನೆಮ್ಮದಿ ಜೀವನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

-ಭತ್ತ ಖರೀದಿ ಕೇಂದ್ರವನ್ನು ರಾಜ್ಯದಲ್ಲಿ ಪ್ರಾರಂಭಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ರೂ 1,850 ಭತ್ತಕ್ಕೆ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಿದ್ದು, ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಕೈಗೆ ಭತ್ತವನ್ನು ನೀಡಿ ನಷ್ಟ ಅನುಭವಿಸಬಾರದು ಎಂದು ರೈತರಿಗೆ ಮನವಿ ಮುಖ್ಯ ಮಂತ್ರಿಗಳು ಮಾಡಿದರು.

-ರೈತರು ಬೆಳೆಯುವ ಬೆಳೆಗಳ ರಕ್ಷಣೆ ಮಾಡುವುದು ಹಾಗೂ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ರೈತರು ಸಾವಯವ ಕೃಷಿ ಕಡೆ ಮಾಡಲು ಸರ್ಕಾರ ಯೋಜನೆಯನ್ನು ರೂಪಿಸುತ್ತಿದ್ದು. ದೂರದೃಷ್ಠಿಯಿದ ಕೆ.ಆರ್.ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾಡುವುದರಿಂದ ರೈತ ಕುಟುಂಬ 50 ಸಾವಿರ ಮಕ್ಕಳಿಗೆ ಉದ್ಯೋಗ ಸೃಷ್ಠಿಯಾಗುತ್ತದೆ. ಇದರಿಂದ ಆರ್ಥಿಕವಾಗಿ ಸದೃಡವಾಗಲು ಸಾಧ್ಯವಾಗುತ್ತದೆ ಹಾಗೂ ಪ್ರವಾಸೋದ್ಯಮ ಬೆಳೆವಣಿಗೆ ಸಾಧ್ಯವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

-ವಿಸಿ ಕಾಲುವೆ ಇರುವ ಎಲ್ಲಾ ಕಡೆ ತಡೆಗೋಡೆಗಳನ್ನು ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಆಗುವ ಅವಗಡಗಳನ್ನು ತಡೆಯಲು ತಡೆಗೋಡೆ ನಿರ್ಮಾಣ ಮಾಡುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

-ಪರಿಹಾರ ವಿತರಣೆ

ಮಾನ್ಯ ಮುಖ್ಯಮಂತ್ರಿ

-ಸೀತಾಪುರ ಗ್ರಾಮದ ಭತ್ತ ಕಟಾವು ಕಾರ್ಯಕ್ರಮದ ಬಳಿಕ ಪಾಂಡವಪುರ ತಾಲ್ಲೂಕಿನ ಕನಗನಮುರಡಿ ಗ್ರಾಮದ ಬಳಿ ನಾಲೆಗೆ ಬಸ್ ಉರುಳಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ವದೇಸಮುದ್ರ ಗ್ರಾಮದಲ್ಲಿ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಣೆ ಮಾಡಿದರು. ಅಪಘಾತದಲ್ಲಿ ಸಾವಿಗೀಡಾದ ಪ್ರತಿ ಮೃತರ ಕುಟುಂಬದ ಸದಸ್ಯರಿಗೆ ತಲಾ ರೂ 5 ಲಕ್ಷ ಸರ್ಕಾರ ಚೆಕ್ನ್ನು ಮುಖ್ಯಮಂತ್ರಿಯವರು ನೀಡಿದರು. ನವೆಂಬರ್ 24 ರಂದು ನಡೆದ ಬಸ್ ದುರಂತದಲ್ಲಿ 30 ಮಂದಿ ಮೃತಪಟ್ಟಿದ್ದು, ಹೆಚ್ಚಿನ ಜನರು ವದೇ ಸಮುದ್ರ ಗ್ರಾಮದವರಾಗಿದ್ದರು.

-ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವರಾದ ಸಾರಾ ಮಹೇಶ್, ಮಂಡ್ಯ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು, ಮಂಡ್ಯ ಲೋಕಸಭಾ ಸದಸ್ಯರಾದ ಎಲ್.ಆರ್.ಶಿವರಾಮೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಾಗರತ್ನಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಅಪ್ಪಾಜಿಗೌಡ ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ಉಪಸ್ಥಿತರಿದ್ದರು.

***********************************************