ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಸಿದ್ದಗಂಗಾ ಶ್ರೀಗಳ ಅಗಲಿಕೆಗೆ ಮುಖ್ಯಮಂತ್ರಿ ಕಂಬನಿ

ಜನವರಿ 21, 2019

-ಸಿದ್ದಗಂಗಾ ಮಠದ ಶ್ರೀಶ್ರೀಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

-‘ನಡೆದಾಡುವ ದೇವರು’ ಎಂದೇ ಹೆಸರಾಗಿದ್ದ ಶ್ರೀಗಳು ತ್ರಿವಿಧ ದಾಸೋಹದಿಂದ ಲಕ್ಷಾಂತರ ಮಕ್ಕಳ ಬಾಳು ಬೆಳಗಿದರು. ಶಿಕ್ಷಣ, ಅನ್ನದಾಸೋಹದ ಅವರ ಕೈಂಕರ್ಯ ದೇಶ, ಭಾಷೆ, ಜಾತಿ, ಧರ್ಮಗಳ ಎಲ್ಲೆ ಮೀರಿ ಎಲ್ಲರಿಗೂ ಮಾದರಿಯಾಗುವಂತಹದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

-ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಶ್ರೀಗಳು ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಿದ ಸೌಭಾಗ್ಯ ನನ್ನದಾಗಿದ್ದು, ಇದೊಂದು ಅವಿಸ್ಮರಣೀಯ ಅನುಭವ ಎಂದು ಅವರು ಸ್ಮರಿಸಿಕೊಂಡಿದ್ದಾರೆ.

-ಆ ಸಂದರ್ಭದಲ್ಲಿಯೇ ನಮ್ಮ ಸರ್ಕಾರವು ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿತ್ತು. ಯಾವುದೇ ಭೇದ ಭಾವವಿಲ್ಲದೆ, ವಿದ್ಯಾದಾನ, ಜನರ ಶ್ರೇಯೋಭಿವೃದ್ಧಿಗಾಗಿ ಅವರು ಕೈಗೆತ್ತಿಕೊಂಡ ಸೇವಾಕಾರ್ಯಗಳು ಅನುಸರಣೀಯ. ಈ ಹಿನ್ನೆಲೆಯಲ್ಲಿ ಈಗ ಮರಣೋತ್ತರವಾಗಿಯಾದರೂ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

-ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿದರೂ, ಮಠದ ಸೇವಾ ಚಟುವಟಿಕೆಗಳು, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಈ ಕಾಯಕ ಯೋಗಿ ನಮ್ಮೊಳಗೆ ಅಜರಾಮರರಾಗಿರುತ್ತಾರೆ ಎಂದು ಮುಖ್ಯಮಂತ್ರಿಗಳು ನುಡಿದಿದ್ದಾರೆ.

-ಕೊನೆಯ ಉಸಿರಿನವರೆಗೂ ತಾವು ನಂಬಿಕೊಂಡ ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಪರಿಪಾಲಿಸಿದ ತ್ರಿವಿಧ ದಾಸೋಹಿಗೆ ನನ್ನ ಭಕ್ತಿಪೂರ್ವಕ ನಮನಗಳು. ಶ್ರೀಗಳ ಅಗಲಿಕೆಯಿಂದ ದುಃಖತಪ್ತರಾದ ಅಸಂಖ್ಯ ಭಕ್ತರು, ವಿದ್ಯಾರ್ಥಿಗಳು, ಹಿತೈಷಿಗಳು, ಮಠದ ಪರಿವಾರ ಮತ್ತು ಸಿಬ್ಬಂದಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

January 21, 2019

Deeply saddened about Siddaganga Seer’s _Lingaikya_ : Chief Minister H.D. Kumaraswamy

-I am deeply saddened to learn about _Lingaikya_ of Shri Shri Shri Dr. Shivakumara Swamiji of Siddaganga Mutt”, said Chief Minister H.D. Kumaraswamy here today.

-Swamiji, fondly known as “ _Nadedaduva Devaru_ ” had lightened up the lives of innumerable chidren through _trividha dasoha_ . His services of providing food, shelter and education to the needy and poor was a model for everyone beyond the borders of region, language, caste and religion, he said.

-He remembered the occasion when Swamiji was conferred with Karnataka Ratna award during his previous tenure as Chief Minister and said that “I was fortunate to do so and will cherish that memory forever”.

-Recalling that his Government had recommended the Union Government to confer Bharath Ratna to Siddaganga swamiji, Chief Minister opined that, Swamiji’s selfless serices to mankind are replicable. Hence once again Government will urge Union Government to confer him Bharat Ratna posthumously.

-Swamiji may not be with us any more physically, but service activities of this “ _Kayaka yogi_ ” through this mutt are immortal, they will remain in our hearts forever, he felt.

-Chief Minister said, “I offer my humble tributes to this _trividha dasohi,_ who lived his belief “ _Kayakave Kailasa_ (work is worship)” till the end. I pray the almighty to give strength to grief stricken devotees, students, staff of the math to endure this loss”.

----------------------