ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಹೊಸ ವರ್ಷಕ್ಕೆ ಮುಖ್ಯಮಂತ್ರಿಗಳ ಶುಭಾಶಯ

ಡಿಸೆಂಬರ್ 31, 2018

“ಇನ್ನೊಬ್ಬರ ಸೇವೆಗೆ ಮುಡುಪಾಗಿಸಿಕೊಳ್ಳುವುದೇ ನಿಮ್ಮನ್ನು ನೀವು ಅರಿತುಕೊಳ್ಳಲು ಇರುವ ಅತ್ಯುತ್ತಮ ಮಾರ್ಗ”

- ಮಹಾತ್ಮಾಗಾಂಧಿ

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳು.

ಸಮೃದ್ಧ, ಸಮಗ್ರ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.

ರೈತರ ಮೊಗದಲ್ಲಿ ತೃಪ್ತಿಯ ನಗು, ನಿರುದ್ಯೋಗಿಗಳಲ್ಲಿ ಕಣ್ಣಲ್ಲಿ ಭರವಸೆಯ ಬೆಳಕು, ದುರ್ಬಲ ವರ್ಗದವರ ಎದೆಯಲ್ಲಿ ಭದ್ರತೆಯ ಭಾವ, ಹಳ್ಳಿ-ಪಟ್ಟಣ-ನಗರಗಳಲ್ಲಿ ಅಭಿವೃದ್ಧಿಯ ಹೊಂಗನಸು ಸಾಕಾರಗೊಳಿಸುವ ನಿಶ್ಚಯದೊಂದಿಗೆ ಹೊಸವರ್ಷಕ್ಕೆ ಅಡಿಯಿಡುವ. ಯಶಸ್ಸು ನಮ್ಮೆಲ್ಲರದಾಗಲಿ.

ಶುಭಾಶಯಗಳೊಂದಿಗೆ

ಹೆಚ್.ಡಿ. ಕುಮಾರಸ್ವಾಮಿ

----------------------