ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಮುಖ್ಯಮಂತ್ರಿಗಳಿಂದ ದೀಪಾವಳಿ ಹಬ್ಬದ ಶುಭಾಶಯಗಳು

ಬೆಂಗಳೂರು, ನವೆಂಬರ್ 05, 2018

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.

-ಬೆಳಕಿನ ಹಬ್ಬ ದೀಪಾವಳಿಯು ಎಲ್ಲರ ಮನೆ-ಮನಗಳನ್ನು ಬೆಳಗಲಿ. ಸುಖ, ಶಾಂತಿ, ನೆಮ್ಮದಿಯ ಬೆಳಕು ಮೂಡಲಿ ಎಂದು ಅವರು ಹಾರೈಸಿದ್ದಾರೆ.

-ಜೊತೆಗೆ ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮ ಪಾಲಿಸಿ, ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಹಾಗೂ ಸುಪ್ರೀಂ ಕೋರ್ಟಿನ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ, ಸಾಧ್ಯವಾದಷ್ಟೂ ಮಾಲಿನ್ಯವಾಗದಂತೆ ತಡೆಯೋಣ ೆಂದು ಅವರು ಮನವಿ ಮಾಡಿದ್ದಾರೆ.