ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಮುಖ್ಯಮಂತ್ರಿಯವರಿಂದ ರಾಜ್ಯೋತ್ಸವದ ಶುಭಾಶಯ

ಬೆಂಗಳೂರು, ನವೆಂಬರ್ 01, 2018

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಎಲ್ಲರಿಗೂ 63ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.

-ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿ ಹೊಂದಿರುವ ನಾಡು ನಮ್ಮದು.‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದಂತೆ, ಶಾಂತಿ, ಸಹಬಾಳ್ವೆ, ಸೌಹಾರ್ದದಿಂದ ನಳನಳಿಸುವ ನಾಡು ಇದು.

-ನಮ್ಮ ನಡೆ, ನುಡಿ, ವ್ಯವಹಾರ- ಎಲ್ಲದರಲ್ಲೂ ಕನ್ನಡತನ ಮೆರೆಯಲಿ. ಏಕೀಕರಣಕ್ಕಾಗಿ ದುಡಿದವರನ್ನು ಸ್ಮರಿಸೋಣ. ಸಮೃದ್ಧ ಕರ್ನಾಟಕವನ್ನು ಕಟ್ಟೋಣ. ತಾಯಿ ಭುವನೇಶ್ವರಿಯ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ'ಎಂದು ಅವರು ಹಾರೈಸಿದ್ದಾರೆ.