ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ವಾಲ್ಮೀಕಿ ಜಯಂತಿ: ಮುಖ್ಯಮಂತ್ರಿ ಶುಭಾಶಯ

ಬೆಂಗಳೂರು, ಅಕ್ಟೋಬರ್ 23, 2018

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಸಂಸ್ಕೃತ ಭಾಷೆಯ ಆದಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಶುಭಾಶಯ ಕೋರಿದ್ದಾರೆ.

-ಸಾಮಾನ್ಯ ಬೇಡನೊಬ್ಬ ವಿಶ್ವಮಾನ್ಯ ಕವಿಯಾಗಿ ಮನ್ನಣೆ ಗಳಿಸುವ ಮೂಲಕ ಅವರು ಶ್ರದ್ಧೆ ಮತ್ತು ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅತ್ಯುತ್ತಮ ನಿದರ್ಶನಗಳು.

-ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ರಾಮಾಯಣದ ಆದರ್ಶಗಳನ್ನು ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳೋಣ. ಅವರು ನೀಡಿದ ರಾಮರಾಜ್ಯದ ಪರಿಕಲ್ಪನೆ ಯನ್ನು ಸಾಕಾರಗೊಳಿಸೋಣ ಎಂದು ಅವರು ಆಶಿಸಿದ್ದಾರೆ.