ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು

know_the_cm

ಕಲಬುರಗಿ ಸೆಪ್ಟೆಂಬರ್ 17, 2018

-ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು

-ಭಾರತ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಹೊಂದಿ 1947ರ ಆಗಸ್ಟ್ 15 ರಂದು ಇಡೀ ದೇಶ ಸಂಭ್ರಮಾಚರಣೆಯಲ್ಲಿದ್ದರೆ, ಗುಜರಾತಿನ ಜುನಾಗಢ, ಕಾಶ್ಮೀರ ಹಾಗೂ ಹೈದರಾಬಾದ್ ಪ್ರಾಂತ್ಯಗಳು ಭಾರತ ಒಕ್ಕೂಟ ವ್ಯವಸ್ಥೆಯಿಂದ ಹೊರಗೆ ಉಳಿದಿದ್ದವು. ಅಂದಿನ ಹೈದರಾಬಾದ್ ಪ್ರಾಂತ್ಯದಲ್ಲಿದ್ದ ಈ ಭಾಗದ ಜನರಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವ.

-ಸರ್ದಾರ್ ವಲ್ಲಭಭಾಯಿ ಪಟೇಲರ ದೃಢಸಂಕಲ್ಪ, ದಿಟ್ಟ ಕ್ರಮದ ಫಲವಾಗಿ ಸ್ವಾತಂತ್ರ್ಯದ ಸವಿ ದೊರಕುವಂತಾಯಿತು. ಈ ಮಹಾನ್ ಚೇತನಕ್ಕೆ ಆದರಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ಹಾಗೂ ಈ ಹೋರಾಟದಲ್ಲಿ ಹುತಾತ್ಮರಾದ ಎಲ್ಲ ಹೋರಾಟಗಾರರಿಗೂ ಹೃತ್ಪೂರ್ವಕ ಗೌರವ ಅರ್ಪಿಸಬಯಸುತ್ತೇನೆ.