ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸಂದೇಶ

ಜೈನಮುನಿ ತರುಣ್ ಸಾಗರ್ ದೇಹತ್ಯಾಗ: ಮುಖ್ಯಮಂತ್ರಿ ಶೋಕ

know_the_cm

ಬೆಂಗಳೂರು ಸೆಪ್ಟೆಂಬರ್ 01, 2018

ಜೈನ ಮುನಿವರ್ಯ ತರುಣ್ ಸಾಗರ್ ಜಿ ಮಹಾರಾಜ್ ಅವರು ದೇಹತ್ಯಾಗ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಜನ ಸಾಮಾನ್ಯರ ದೈನಂದಿನ ಬದುಕಿನ ವಿಷಯಗಳಿಗೆ ಸಂಬಂಧಿಸಿದ ಅವರ ಪ್ರವಚನಗಳು ಕಹಿ ಮಾತ್ರೆಗಳೆಂದೇ ಜನಪ್ರಿಯವಾಗಿದ್ದವು.

ಅವರನ್ನು ಖುದ್ದು ಭೇಟಿಯಾಗಿ ಅವರ ಪ್ರಖರ ವಿಚಾರಧಾರೆಯನ್ನು ಆಲಿಸುವ ಸದವಕಾಶವೂ ನನಗೆ ಒದಗಿತ್ತು. ಅವರಿಗೆ ಭಗವಂತ ಮೋಕ್ಷ ದಯಪಾಲಿಸಲಿ.

ಭೌತಿಕ ಜಗತ್ತಿನಲ್ಲಿ ಮುನಿವರ್ಯರು ಇಲ್ಲದಿದ್ದರೂ ಅವರ ವಿಚಾರಧಾರೆಗಳು ಜನಮಾನಸದಲ್ಲಿ ಎಂದೆಂದಿಗೂ ಹಸಿರಾಗಿ ಉಳಿಯುವುದು ಎಂದು ಅವರು ತಿಳಿಸಿದ್ದಾರೆ.