ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಜನತಾ ದರ್ಶನ

ಎರಡೇ ದಿನದಲ್ಲಿ ಫ್ಲಾಟ್ ನೋಂದಣಿ - ಥ್ಯಾಂಕ್ಯು ಸಿಎಂ

know_the_cm

ಗೃಹ ಕಛೇರಿ ಕೃಷ್ಣಾ (ಬೆಂಗಳೂರು) ಸೆಪ್ಟೆಂಬರ್ 04:

ಹಣ ಪಾವತಿಸಿದ ನಂತರವೂ ಫ್ಲಾಟ್ ನೋಂದಾಯಿಸದೆ ಬೆದರಿಕೆಯೊಡ್ಡಿದ ಬಿಲ್ಡರುಗಳು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ ಎರಡೇ ದಿನದಲ್ಲಿ ಫ್ಲಾಟ್ ನೋಂದಾಯಿಸಿ ನೀಡಿದ್ದಾರೆ.

ಶನಿವಾರ ನಡೆದ ಜನತಾದರ್ಶನದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವಂದನಾ ಎಂಬವರು ವಿಕೆಸಿ ಬಿಲ್ಡರ್ ಎಂಬ ಸಂಸ್ಥೆಯವರಿಗೆ 65 ಲಕ್ಷ ರೂ. ಪಾವತಿಸಿ ಫ್ಲಾಟ್ ಬುಕ್ ಮಾಡಿದ್ದು, ನೋಂದಾಯಿಸದೇ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರು ನೀಡಿದ್ದರು.

ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಬಿಲ್ಡರುಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದರು.

ಅದರಂತೆ ಪೂರ್ವ ವಿಭಾಗದ ಡಿಸಿಪಿ ಪ್ರಕರಣ ದಾಖಲಿಸಿದ್ದು, ಇದಾದ ಎರಡೇ ದಿನಕ್ಕೆ ವಂದನಾ ಅವರಿಗೆ ಬಿಲ್ಡರುಗಳು ಫ್ಲಾಟ್ ನೋಂದಾಯಿಸಿದ್ದಾರೆ.

ವಂದನಾ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.

ಬಿಲ್ಡರ್ಸ್ ನವರಿಂದ ನೊಂದ ವಂದನಾಗೆ ಇಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಖುದ್ಧಾಗಿ ಮನೆಯ ಕಾಗದ ಪತ್ರಗಳನ್ನು ಹಸ್ತಾಂತರಿಸಿದರು.