ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಜನತಾ ದರ್ಶನ

ಜನತಾ ದರ್ಶನದಲ್ಲಿ ಕಂಡದ್ದು ಕಣ್ಣೀರ ಕಥೆ..

know_the_cm

ಗೃಹ ಕಛೇರಿ ಕೃಷ್ಣಾ (ಬೆಂಗಳೂರು) ಸೆಪ್ಟೆಂಬರ್ 01:ದಾವಣಗೆರೆ ಜಿಲ್ಲೆಯ ಯುವಕನೊಬ್ಬ ಸಾಲದ ಸುಳಿಯಲ್ಲಿ ಸಿಲುಕಿದ ಕಥೆಯಿದು.

ಹೊನ್ನಾಳಿ ತಾಲ್ಲೂಕಿನ ರೇವಣಸಿದ್ದಪ್ಪನ ತಂದೆ 6 ವರ್ಷದ ಹಿಂದೆ ಖಾಸಗಿಯವರಿಂದ 1.56 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದರಲ್ಲಿ 76 ಸಾವಿರ ರೂಪಾಯಿ ಸಾಲ ತೀರಿಸಿದ್ದರು. ಆದರೆ ಸಾಲಗಾರರ ಕಿರುಕುಳದಿಂದ ನೊಂದು ಮೃತಪಟ್ಟರು. ಸಾಲ ತೀರಿಸುವಂತೆ ಕಿರುಕುಳ ನೀಡಿದ ಸಾಲಗಾರರು ಸಾಲದ ಹಣ ಹಿಂತಿರುಗಿಸಿ, ಜಮೀನಿನ ಪತ್ರ ಕೇಳಲು ಹೋದಾಗ 26 ಲಕ್ಷ ಸಾಲ ಬಾಕಿ ಇದೆ ಎಂದು ಕಾರಣ ನೀಡಿ ಜಮೀನಿನ ಕಾಗದಪತ್ರ ನೀಡಲು ನಿರಾಕರಿಸಿ ಆತನಿಗೆ ಜೀವನಾಧಾರವಾಗಿದ್ದ ಒಂದು ಎಕರೆ ಜಮೀನಿನ ಕಾಗದಪತ್ರಗಳನ್ನೂ ವಶಪಡಿಸಿಕೊಂಡಿದ್ದರು. ಪೊಲೀಸರಿಗೆ ದೂರು ನೀಡಿದರೂ ನ್ಯಾಯ ದೊರೆಯಲಿಲ್ಲವೆಂದು ಮುಖ್ಯಮಂತ್ರಿಗಳ ಬಳಿ ಬಂದಿದ್ದ.

ಜನತಾದರ್ಶನದಲ್ಲಿ ರೇವಣಸಿದ್ದಪ್ಪನ ಅಹವಾಲು ಆಲಿಸಿದ ಮುಖ್ಯಮಂತ್ರಿಗಳು ಕೂಡಲೇ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾತನಾಡಿ ಜಮೀನಿನ ಕಾಗದಪತ್ರ ಮರಳಿ ಕೊಡಿಸುವಂತೆ ಹಾಗೂ ಯುವಕನಿಗೆ ಕಿರುಕುಳ ನೀಡಿದರೆ ಆ ಸಾಲಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬೆಂಗಳೂರಿನ ಗಿರಿನಗರದ ಅಣ್ಣಿಯಮ್ಮ ಮನೆಯೇ ಕಳೆದುಕೊಳ್ಳುವಂತಾಗಿತ್ತು.

ಪತಿ 1.26 ಲಕ್ಷ ರೂ.ಗಳ ಕೈ ಸಾಲ ಪಡೆದ್ದರು. ಈ ಪೈಕಿ 78 ಸಾವಿರ ರೂ.ಗಳನ್ನು ತೀರಿಸಿಯೂ ಇದ್ದರು. ಈ ಮಧ್ಯೆ ಅಣ್ಣಿಯಮ್ಮನ ಪತಿ ಹೃದಯಾಘಾತವಾಗಿ ಮೃತ ಪಟ್ಟರು. ಕೆಲಸದ ನಿಮಿತ್ತ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಸಾಲ ಕೊಟ್ಟ ವ್ಯಕ್ತಿ ಆಕೆಯ ಮನೆಯ ಬೀಗ ಒಡೆದು ಮನೆಯನ್ನ ಸ್ವಾಧೀನ ಪಡಿಸಿಕೊಂಡು ಅಕ್ರಮವಾಗಿ ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದರು.

ಜನತಾದರ್ಶನದಲ್ಲಿ ಅಣ್ಣಿಯಮ್ಮ ನೆರವಿಗಾಗಿ ಮುಖ್ಯಮಂತ್ರಿ ಗಳ ಮೊರೆಹೋದರು.

ಕೂಡಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರೊoದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಆಕೆಯೊoದಿಗೆ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರನ್ನು ಕಳುಹಿಸಿ ಆಕೆಯ ಮನೆಯನ್ನು ಪುನ: ಅವರ ಸ್ವಾಧೀನಕ್ಕೆ ಕೊಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.