ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಜನತಾ ದರ್ಶನ

ಅಹವಾಲು ಸ್ವೀಕಾರ: ಅರ್ಜಿಗಳ ಮಹಾಪೂರ

know_the_cm

ಬೀದರ್ ನವೆಂಬರ್ 15, 2018

-ಮಾನ್ಯ ಮುಖ್ಯಮಂತ್ರಿ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ದಾಖಲೆಯ ಪ್ರಮಾಣದಲ್ಲಿ ಅರ್ಜಿಗಳು ಸ್ವೀಕೃತವಾಗಿವೆ‌.

-ನೆಹರೂ ಕ್ರೀಡಾಂಗಣದ ಸಹಕಾರಿ ಸಪ್ತಾಹ ವೇದಿಕೆಯ ಪಕ್ಕದಲ್ಲಿ ಹಾಕಿದ್ದ ಎರಡು ಮಳಿಗೆಗಳಲ್ಲಿ ಜನರು ಸಾಲುಸಾಲಾಗಿ ನಿಂತು ಅರ್ಜಿ ಸಲ್ಲಿಸಿದರು. ತಮ್ಮ ಬೇಕು ಬೇಡಿಕೆಗಳ ಅಹವಾಲನ್ನು ಸಲ್ಲಿಸಿ ಹೆಸರು ನೊಂದಾಯಿಸಿ ಸ್ವೀಕೃತಿ ಪಡೆದರು.

-ಈ ಮಳಿಗೆಯಲ್ಲಿ ಸಂಜೆ 4.30ರ ಅವಧಿಯಲ್ಲಿ ಒಟ್ಟು 497 ಅರ್ಜಿಗಳು ಸ್ವೀಕೃತವಾಗಿದ್ದವು.

-ಮುಖ್ಯಮಂತ್ರಿ ಅವರು ಮಾತನಾಡುವ ವೇಳೆಯಲ್ಲಿ, ಈ ವಿಷಯ ಪ್ರಸ್ತಾಪಿಸಿ, ಈ ಅರ್ಜಿಗಳನ್ನು ಪರಿಶೀಲಿಸಿ ಕೆಲ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ತಿಳಿಸುವೆ. ಬಾಕಿ ಅರ್ಜಿಗಳ ವಿಲೇವಾರಿಗೆ ಕೂಡಲೇ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುವೆ ಎಂದು ತಿಳಿಸಿದರು.

-ನಮಗೆ ಬ್ಯಾಂಕುಗಳಿಂದ ಲೋನ್ ಸಿಗುತ್ತಿಲ್ಲ. ಪೆನ್ಶನ್ ಕೊಡುತ್ತಿಲ್ಲ. ನಮ್ಮ ಹೊಲಕ್ಕೆ ದಾರಿ ಇಲ್ಲ. ನಮಗೆ ಮನೆ ನಿರ್ಮಿಸಿಕೊಡಿ, ಉದ್ಯೋಗ ಕೊಡಿ. ರಸ್ತೆ ನಿರ್ಮಿಸಿ ಕೊಡಿ, ಹೈಸ್ಕೂಲ್ ಮಂಜೂರಿ ಮಾಡಿ ಎನ್ನುವ ಹತ್ತು ಹಲವು ವಿಧದ ಅಹವಾಲುಗಳನ್ನು ಸಾರ್ವಜನಿಕರು ಸಲ್ಲಿಸಿದ್ದಾರೆ ಎಂದು ತಹಸೀಲ್ದಾರರಾದ ಕೀರ್ತಿ ಚಾಲಕ, ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿದರು.

***********************************