ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಜನತಾ ದರ್ಶನ

ಮುಖ್ಯಮಂತ್ರಿಗಳ ಮಾನವೀಯ ಮುಖ: ಬೀದಿಯಲ್ಲಿ ಹೂ ಮಾರುವ ಹುಡುಗಿಯ ಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ!

know_the_cm

ಶ್ರೀರಂಗಪಟ್ಟಣ: ಬೀದಿಯಲ್ಲಿ ಹೂ ಮಾರಾಟ ಮಾಡುತ್ತಿದ್ದ ಬಾಲಕಿಯೊಬ್ಬಳ ಸಂಕಶ್ಃಟಕ್ಕೆ ಸ್ಪಂದಿಸುವ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮಲ್ಲಿನ ಮಾನವೀಯ ಮುಖವನ್ನು ಮತ್ತೆ ಅನಾವರಣಗೊಳಿಸಿದರು.

ಕೆ.ಆರ್.ಎಸ್ ನಿಂದ ರಾಮನಗರಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅವರು ಮಾರ್ಗದ ನಡುವೆ ಶ್ರೀರಂಗಪಟ್ಟಣ ರಸ್ತೆ ಬೆಳಗೊಳದಲ್ಲಿ ರಸ್ತೆ ಬದಿ ಹೂ ವ್ಯಾಪಾರ ಮಾಡುತ್ತಿದ್ದ ಪುಟ್ಟ ಬಾಲಕಿಯನ್ನು ಗಮನಿಸಿ, ತಕ್ಷಣ ಕಾರ್ ನಿಲ್ಲಿಸಿದ ಮುಖ್ಯಮಂತ್ರಿ ಅವರು ಬಾಲಕಿಯನ್ನು ಕರೆದು ಅವಳ ಕಷ್ಟವನ್ನು ಆಲಿಸಿದರು.

ಬಾಲಕಿ ಶಾಬಾಬ್ತಾಜ್ ತನ್ನ ಕುಟುಂಬದ ಸಂಕಷ್ಟವನ್ನು ಮುಖ್ಯಮಂತ್ರಿಗಳಲ್ಲಿ ಅರಿಕೆ ಮಾಡಿದಾಗ ಮುಖ್ಯಮಂತ್ರಿ ಅವರು ಆಕೆಗೆ ಅವಳ ತಂದೆ ತಾಯಿಗಳು ತನ್ನನ್ನು ಭೇಟಿಯಾಗುವಂತೆ ಹೇಳಿದರು. ಅಲ್ಲದೆ ಬಾಲಕಿಯ ಶಿಕ್ಷಣಕ್ಕೆ ಸಹ ನೆರವು ನೀಡುವ ಭರವಸೆ ವ್ಯಕ್ತಪಡಿಸಿದರು.