"2018-19ನೇ ಸಾಲಿನ ಮುಂಗಡಪತ್ರ (English)

"ಸಚಿವ ಸಂಪುಟದ ನಿರ್ಣಯಗಳು

"ಸಂಸತ್ತಿನಲ್ಲಿ ಒಕ್ಕೊರಲ ಧ್ವನಿ ಮೊಳಗಿಸಿ, ಕಾವೇರಿ ನಿರ್ವಹಣಾ ಮಂಡಳಿಯ ಪ್ರಸ್ತಾವವನ್ನು ವಿರೋಧಿಸಿ - ಮುಖ್ಯಮಂತ್ರಿ

"ನವ ಕರ್ನಾಟಕ ನಿರ್ಮಾಣ ವಿಷನ್ 2025

"ನವ ಕರ್ನಾಟಕ ನಿರ್ಮಾಣ ಮಂಥನ ಸಭೆ - ಸನ್ಮಾನ್ಯ ಮುಖ್ಯಮಂತ್ರಿಯವರ ಭಾಷಣದ ಮುಖ್ಯಾಂಶಗಳು

"ಪ್ರಜಾವಾಣಿ ಪತ್ರಿಕೆಯೊಂದಿಗೆ ಮಾನ್ಯ ಮುಖ್ಯಮಂತ್ರಿಯವರು ನಡೆಸಿದ ಸಂವಾದ ಸಂದರ್ಶನದ ಮುಖ್ಯಾಂಶಗಳು

"ಟೇಕಾಫ್ ಆಗದ ಸರ್ಕಾರ - ಪ್ರತಿಪಕ್ಷ ನಾಯಕರ ಟೀಕೆಗೆ ಮುಖ್ಯಮಂತ್ರಿಯಿಂದ ಪ್ರಶ್ನೆಗಳ ಸುರಿಮಳೆ

"ನುಡಿದಂತೆ ನಡೆದ ಸರ್ಕಾರ ನಮ್ಮದು – ಮುಖ್ಯಮಂತ್ರಿ

"2018-19ನೇ ಸಾಲಿನ ಮುಂಗಡಪತ್ರ (ಕನ್ನಡ)

"ಕೇಂದ್ರ ಬಜೆಟ್ 2018 - ದೂರದರ್ಶಕತ್ವವಿಲ್ಲದ, ಗೊತ್ತು ಗುರಿ ಇಲ್ಲದ, ಹಾಗೂ ಜನಪರವಲ್ಲದ ಬಜೆಟ್ ಎಂದು ಮುಖ್ಯಮಂತ್ರಿ ಬಣ್ಣನೆ

ತಾಜಾಸುದ್ದಿ

ಮಾರ್ಚ್ 23

ವಿಧಾನಸೌಧ (ಬೆಂಗಳೂರು) : ವಿಧಾನ ಸೌಧದಲ್ಲಿ ನಡೆದ ರಾಜ್ಯಸಭಾ ದ್ವೈವಾರ್ಷಿಕ ಮತದಾನದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಭಾಗಿಯಾಗಿ ಮತ ಚಲಾಯಿಸಿದರು.

ಮಾರ್ಚ್ 23

ವಿಧಾನಸೌಧ (ಬೆಂಗಳೂರು) : ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಸಂಬಂಧ ರಚನೆಯಾಗಿರುವ ತಜ್ಞರ ಸಮಿತಿಯು ತನ್ನ ವರದಿಯನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು.

ಮಾರ್ಚ್ 22

ವಿಧಾನಸೌಧ (ಬೆಂಗಳೂರು) : ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾವೇರಿ ಜಲ ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕುರಿತು ಚರ್ಚಿಸಲು ಕರೆದಿದ್ದ ಸಂಸದರ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಭಾಗವಹಿಸಿದರು.

ಮಾರ್ಚ್ 22

ಗದಗ : ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಉದ್ಘಾಟನೆ, ವಿಶ್ವ ವಿದ್ಯಾಲಯದ ನೂತನ ಕಟ್ಟಡಗಳಿಗೆ ಶಂಕುಸ್ಥಾಪನೆ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೂತನ ಬೋಧಕ ಆಸ್ಪತ್ರೆ ಮತ್ತು ಸಂಸ್ಥೆಯ 2ನೇ ಹಂತದ ಕಟ್ಟಡ ಕಾಮಗಾರಿಗಳಿಗೆ ಶಿಲಾನ್ಯಾಸ, ನೂತನ ಕಟ್ಟಡಗಳ ಸಂಕೀರ್ಣ ಮತ್ತು ವಿವಿಧ ನಾಗರಿಕ ಸೌಲಭ್ಯಗಳು, 343 ಗ್ರಾಮೀಣ ಜನವಸತಿಗಳಿಗೆ ನದಿ ಮೂಲದಿಂದ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಲೋಕಾರ್ಪಣೆ ಸೇರಿದಂತೆ ಗದಗ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಮಾರ್ಚ್ 17

ಬೆಂಗಳೂರು : ಚಾಂದ್ರಮಾನ ಯುಗಾದಿಯ ಸುಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.

ಮಾರ್ಚ್ 15

ಗೌರಿಬಿದನೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಛಾಟನೆ ಹಾಗೂ ಶಿಲಾನ್ಯಾಸವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದರು.

ಮಾರ್ಚ್ 15

ಹೊಸದುರ್ಗ : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಛಾಟನೆ ಹಾಗೂ ಶಿಲಾನ್ಯಾಸವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದರು.

ಮಾರ್ಚ್ 15

ಗೃಹ ಕಚೇರಿ ಕೃಷ್ಣಾ(ಬೆಂಗಳೂರು) : ರಾಜ್ಯದ ಸಂರಕ್ಷಣೆ ತಂತ್ರಾಂಶಕ್ಕೆ ಕೇಂದ್ರ ಸರ್ಕಾರ ನೀಡಿರುವ "ಸ್ವರ್ಣ" ಪ್ರಶಸ್ತಿಯನ್ನು ಮಾನ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಇದೇ ವೇಳೆ ಕೃಷಿ ಇಲಾಖೆ ರೂಪಿಸಿರುವ ಸೇವಾ ಸಿಂಧು ಯೋಜನೆಯ ಉದ್ಘಾಟನೆಯನ್ನು ನೆರವೇರಿಸಿದರು.

ಮಾರ್ಚ್ 15

ಬೆಂಗಳೂರು : ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತ ಸಂಸ್ಥೆಯು ನಗರದ ರಾಜಾಜಿನಗರದ ಡಾ. ರಾಜ್‍ಕುಮಾರ್ ರಸ್ತೆಯ ಒರಾಯನ್‍ಮಾಲ್ ಮುಂಭಾಗದಲ್ಲಿ 40 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ‘ಸಂಪರ್ಕಸೌಧ’ ಕಟ್ಟಡವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.

ಮಾರ್ಚ್ 14

ಬೆಂಗಳೂರು : ಯಶವಂತಪುರ ವಿಧಾನಸಭೆ ಕ್ಷೇತ್ರದ ಕೆಂಗೇರಿ ಉಪ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ಐದನೇ ಹಂತದ ಮೊದಲನೇ ಘಟ್ಟಕ್ಕೆ ಚಾಲನೆ, ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸುವ ವ್ಯವಸ್ಥೆಗೆ ಶಂಕುಸ್ಥಾಪನೆ ಹಾಗೂ ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಲೋಕಾರ್ಪಣೆಯನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದರು.

ಮಾರ್ಚ್ 13

ದಾವಣಗೆರೆ : ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಮಾರ್ಚ್ 13

ಬ್ಯಾಡಗಿ : ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಮಾರ್ಚ್ 12

ಕೂಡಲಸಂಗಮ : ದೆಹಲಿಯ ಅಕ್ಷರ ಧಾಮ ಮಾದರಿಯಲ್ಲಿ ಕೂಡಲಸಂಗಮದಲ್ಲಿ ನಿರ್ಮಾಣಗೊಳ್ಳಲಿರುವ ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸಿದರು.

ಮಾರ್ಚ್ 11

ವಿಧಾನಸೌಧ (ಬೆಂಗಳೂರು) : ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಸಹಾಯಧನ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಆಯ್ಕೆಯಾಗಿರುವ ಫಲಾನುಭವಿಗಳಿಗೆ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ಯಾಕ್ಸಿ ವಾಹನವನ್ನು ವಿತರಿಸಿದರು.

ಮಾರ್ಚ್ 11

ವಿಧಾನಸೌಧ (ಬೆಂಗಳೂರು) : ಶಾಸಕರ ಭವನದ ಆವರಣದಲ್ಲಿ ಸಂತ ಶ್ರೇಷ್ಠ ಶ್ರೀ ಕನಕದಾಸರು ಹಾಗೂ ವಿಧಾನಸೌಧ ಆವರಣದಲ್ಲಿ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕ್ಯಾಸಂಬಳ್ಳಿ ಚೆಂಗಲರಾಯರೆಡ್ಡಿ(ಕೆ.ಸಿ. ರೆಡ್ಡಿ) ಅವರ ಪ್ರತಿಮೆಯನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು.

ಮಾರ್ಚ್ 11

ಬೆಂಗಳೂರು : ವಿವಿಧ ದಲಿತ ಸಂಘಟನೆಗಳು ಬೆಂಗಳೂರಿನ ಪುರಭವನದಲ್ಲಿ ಏರ್ಪಡಿಸಿದ್ದ "ಎತ್ತ ಸಾಗುತ್ತಿದೆ ಭಾರತ" ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದರು.